ಏಷ್ಯಾ ಕಪ್ ಫೈನಲ್ ಗೂ ಮೊದಲು ಟೀಂ ಇಂಡಿಯಾಕ್ಕೆ ಹೊಸ ತಲೆನೋವು

ಶುಕ್ರವಾರ, 28 ಸೆಪ್ಟಂಬರ್ 2018 (08:59 IST)
ದುಬೈ: ಇಂದು ಏಷ್ಯಾ ಕಪ್ ಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ ಬಾಂಗ್ಲಾದೇಶವನ್ನು ಎದುರಿಸಲಿದ್ದು, ನಾಯಕ ರೋಹಿತ್ ಶರ್ಮಾಗೆ ಹೊಸ ತಲೆನೋವು ಶುರುವಾಗಿದೆ.

ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ತಮ್ಮ ಬೆಂಚ್ ಆಟಗಾರರಿಗೆ ಅವಕಾಶ ನೀಡಿದ್ದ ಟೀಂ ಇಂಡಿಯಾಗೆ ಈಗ ಫೈನಲ್ ಪಂದ್ಯಕ್ಕೆ ಯಾರನ್ನು ಆಯ್ಕೆ ಮಾಡುವುದು, ಯಾರನ್ನು ಬಿಡುವುದು ಎಂಬ ಚಿಂತೆ ಶುರುವಾಗಿದೆ.

ಆರಂಭಿಕರಾಗಿ ಕೆಎಲ್ ರಾಹುಲ್ ಮಿಂಚಿದ್ದು, ಅಂಬುಟಿ ರಾಯುಡು, ಮೊಹಮ್ಮದ್ ಖಲೀಲ್ ಸೇರಿದಂತೆ ಎಲ್ಲರೂ ಉತ್ತಮ ಪ್ರದರ್ಶನ ತೋರಿರುವುದರಿಂದ ರೋಹಿತ್ ಶರ್ಮಾಗೆ ಆಡುವ 11 ರ ಬಳಗವನ್ನು ಆರಿಸುವ ಸವಾಲು ಎದುರಾಗಿದೆ.

ಇನ್ನೊಂದೆಡೆ ಪಾಕಿಸ್ತಾನವನ್ನು ಸೋಲಿಸಿ ಫೈನಲ್ ಗೇರಿರುವ ಬಾಂಗ್ಲಾದೇಶಕ್ಕೆ ಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ ಸವಾಲು ಎದುರಿಸುವ ಉತ್ಸಾಹ ಬಂದಿದೆ. ಆದರೆ ಪಾಕ್ ತಂಡವನ್ನು ಸೋಲಿಸಿದಷ್ಟು ಸುಲಭವಾಗಿ ಟೀಂ ಇಂಡಿಯಾ ಎದುರಿಸಲು ಸಾಧ್ಯವಾಗದು ಎಂಬುದೂ ಅದಕ್ಕೆ ಅರಿವಿದೆ. ಹಾಗಿದ್ದರೂ ಕೆಲವೊಂದು ಅಚ್ಚರಿಯ ಫಲಿತಾಂಶಗಳನ್ನು ನೀಡಲು ಹೆಸರುವಾಸಿಯಾಗಿರುವ ಬಾಂಗ್ಲಾವನ್ನು ಟೀಂ ಇಂಡಿಯಾ ಹಗುರವಾಗಿ ಕಾಣುವಂತಿಲ್ಲ.

ಪಂದ್ಯ: ಸಂಜೆ 5 ಗಂಟೆಗೆ
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ