India-Australia T20I: ಬೆಂಗಳೂರಿನಲ್ಲಿ ಇಂದು ಕೊನೆಯ ಪಂದ್ಯ
ಈಗಾಗಲೇ ಟೀಂ ಇಂಡಿಯಾ 3-1 ರಿಂದ ಸರಣಿ ಕೈವಶ ಮಾಡಿಕೊಂಡಿರುವುದರಿಂದ ಇಂದಿನ ಪಂದ್ಯ ಕೇವಲ ಔಪಚಾರಿಕ ಪಂದ್ಯವಾಗಲಿದೆ. ಅತ್ತ ಆಸ್ಟ್ರೇಲಿಯಾವೂ ಈ ಸರಣಿಯನ್ನು ಗಂಭೀರವಾಗಿ ಪರಿಗಣಿಸಿದಂತಿಲ್ಲ.
ಹಾಗಿದ್ದರೂ ಬೆಂಗಳೂರಿನಲ್ಲಿ ಯಾವುದೇ ಪಂದ್ಯ ನಡೆದಾಗಲೂ ಪ್ರೇಕ್ಷಕರಿಗೆ ಕೊರತೆ ಇರುವುದಿಲ್ಲ. ಇಂದೂ ಕೂಡಾ ವಾರಂತ್ಯವಾಗಿರುವ ಕಾರಣ ಸಾಕಷ್ಟು ಸಂಖ್ಯೆಯಲ್ಲಿ ಪ್ರೇಕ್ಷಕರು ಆಗಮಿಸುವ ಸಾಧ‍್ಯತೆಯಿದೆ.
ಭಾರತ ತಂಡದಲ್ಲಿ ಇಂದಿನ ಪಂದ್ಯಕ್ಕೆ ಹೆಚ್ಚಿನ ಬದಲಾವಣೆ ಸಾಧ‍್ಯತೆಯಿಲ್ಲ. ಅತ್ತ ಆಸ್ಟ್ರೇಲಿಯಾ ಹೊಸ ಹೊಸ ಆಟಗಾರರಿಗೆ ಅವಕಾಶ ನೀಡುತ್ತಿದೆ. ಹೀಗಾಗಿ ಎರಡೂ ತಂಡಗಳೂ ತಮ್ಮ ಯುವ ಕ್ರಿಕೆಟಿಗರನ್ನು ಪರೀಕ್ಷೆಗೊಡ್ಡುತ್ತಿದ್ದಾರೆ. ಇಂದಿನ ಪಂದ್ಯ ಗೆದ್ದು ಪ್ರತಿಷ್ಠೆ ಉಳಿಸಿಕೊಳ್ಳಲು ಆಸ್ಟ್ರೇಲಿಯಾ ಪ್ರಯತ್ನಿಸಬಹುದು. ಈ ಪಂದ್ಯ ಸಂಜೆ 7 ಗಂಟೆಗೆ ಆರಂಭವಾಗಲಿದೆ.