ಟೀಂ ಇಂಡಿಯಾಗೆ ಕೊಹ್ಲಿ, ಕೆಎಲ್ ರಾಹುಲ್ ನಾಯಕ? ಏಕಕಾಲಕ್ಕೆ ಎರಡು ಪಂದ್ಯ ಆಡಲಿರುವ ಭಾರತ

ಭಾನುವಾರ, 10 ಮೇ 2020 (09:09 IST)
ಮುಂಬೈ: ಕೊರೋನಾದಿಂದಾಗಿ ಬಿಸಿಸಿಐ ಕೂಡಾ ಸಾಕಷ್ಟು ಆರ್ಥಿಕ ಸಂಕಷ್ಟಕ್ಕೊಳಗಾಗಿದೆ. ಈ ಹೊರೆ ಇದೀಗ ಕ್ರಿಕೆಟಿಗರ ಮೇಲೆ ಬೀಳಲಿದೆ.


ಅತ್ತ ಐಪಿಎಲ್ ನಡೆದಿಲ್ಲ. ಇತ್ತ ಬೇರೆ ಕ್ರೀಡಾಕೂಟಗಳೂ ಅನಿಶ್ಚಿತತೆಯಲ್ಲಿದೆ. ಹೀಗಾಗಿ ಬಿಸಿಸಿಐಗೆ ಭಾರೀ ಪ್ರಮಾಣದಲ್ಲಿ ನಷ್ಟವಾಗಲಿದೆ. ಈ ನಷ್ಟ ಸರಿದೂಗಿಸಲು ಭಾರತ ಏಕಕಾಲಕ್ಕೆ ಎರಡು ಮಾದರಿಯ ಪಂದ್ಯವಾಡಿದರೂ ಅಚ್ಚರಿಯಿಲ್ಲ.

ಒಂದೆಡೆ ವಿರಾಟ್ ಕೊಹ್ಲಿ ನೇತೃತ್ವದಲ್ಲಿ ಕೆಲವು ಕ್ರಿಕೆಟಿಗರು ಟೆಸ್ಟ್ ಸರಣಿ ಆಡಿದರೆ ಅದೇ ಕಾಲಕ್ಕೆ ಟಿ20, ಏಕದಿನ ಪಂದ್ಯಗಳ ನಾಯಕತ್ವ ಕೆಎಲ್ ರಾಹುಲ್ ಹೆಗಲಿಗೇರಿಸಿ ಏಕಕಾಲಕ್ಕೆ ಆಯೋಜಿಸಲಲು ಬಿಸಿಸಿಐ ಚಿಂತನೆ ನಡೆಸಿದೆ. ಆದರೆ ಈ ಬಗ್ಗೆ ಇನ್ನೂ ಅಂತಿಮ ನಿರ್ಧಾರವಾಗಿಲ್ಲ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ