ಟೀಂ ಇಂಡಿಯಾ ಎರಡನೇ ತಂಡಕ್ಕೂ ಕ್ವಾರಂಟೈನ್
ಕ್ವಾರಂಟೈನ್ ಗೆ ಮೊದಲು ಆಟಗಾರರು ಆರ್ ಟಿಪಿಸಿಆರ್ ಪರೀಕ್ಷೆಗೊಳಗಾಗಲಿದ್ದಾರೆ. 14 ದಿನಗಳ ಕ್ವಾರಂಟೈನ್ ಮುಗಿಸಿ ಜೂನ್ 28 ರಂದು ಲಂಕಾಗೆ ಪ್ರಯಾಣ ಬೆಳೆಸಲಿದ್ದಾರೆ. ಅಲ್ಲಿ ತಲುಪಿದ ಮೇಲೆ ಮೂರು ದಿನ ಐಸೋಲೇಟ್ ಆಗಿರಲಿರುವ ಕ್ರಿಕೆಟಿಗರು ಬಳಿಕ ಅಭ್ಯಾಸದಲ್ಲಿ ತೊಡಗಿಸಿಕೊಳ್ಳಲಿದ್ದಾರೆ.