ಟಿ20 ವಿಶ್ವಕಪ್: ಭರ್ಜರಿ ರನ್ ರೇಟ್ ನೊಂದಿಗೆ ಗೆದ್ದ ಟೀಂ ಇಂಡಿಯಾ
ಮೊದಲು ಬ್ಯಾಟಿಂಗ್ ಮಾಡಿದದ ಸ್ಕಾಟ್ ಲೆಂಡ್ 86 ರನ್ ಗಳ ಗೆಲುವಿನ ಗುರಿ ನಿಗದಿಪಡಿಸಿತು. ಈ ಸುಲಭ ಮೊತ್ತ ಭಾರತದ ಬಲಾಢ್ಯ ಬ್ಯಾಟಿಂಗ್ ಗೆ ಸುಲಭ ತುತ್ತಾಯಿತು. ಕೇವಲ 6.3 ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ 89 ರನ್ ಗಳಿಸಿ ಭರ್ಜರಿ ಜಯ ಸಾಧಿಸಿತು.
ಆರಂಭಿಕ ರೋಹಿತ್ ಶರ್ಮಾ 16 ಎಸೆತಗಳಲ್ಲಿ 30, ಕೆಎಲ್ ರಾಹುಲ್ 19 ಎಸೆತದಲ್ಲಿ 50 ರನ್ ಗಳಿಸಿ ಮಿಂಚಿದರು. ನಾಯಕ ಕೊಹ್ಲಿ ಅಜೇಯ 2, ಸೂರ್ಯಕುಮಾರ್ ಯಾದವ್ ಅಜೇಯ 6 ರನ್ ಗಳಿಸಿ ಭಾರತದ ಗೆಲುವಿನ ಔಪಚಾರಿಕತೆ ಮುಗಿಸಿದರು. ಇದರೊಂದಿಗೆ ಅಂಕಪಟ್ಟಿಯಲ್ಲಿ ಟೀಂ ಇಂಡಿಯಾ 4 ಪಂದ್ಯಗಳಿಂದ 2 ಗೆಲುವು, 2 ಸೋಲು ಸಹಿತ 4 ಅಂಕ ಮತ್ತು +1.619 ರನ್ ಸರಾಸರಿ ಪಡೆಯಿತು.