ಟೀಂ ಇಂಡಿಯಾ ಬೌಲರ್ ಗಳ ಸಂಘಟಿತ ಹೋರಾಟಕ್ಕೆ ತಲೆಬಾಗಿದ ನ್ಯೂಜಿಲೆಂಡ್
ಭಾನುವಾರ, 3 ಫೆಬ್ರವರಿ 2019 (15:23 IST)
ವೆಲ್ಲಿಂಗ್ಟನ್: ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಐದನೇ ಏಕದಿನ ಪಂದ್ಯವನ್ನು 35 ರನ್ ಗಳಿಂದ ಗೆದ್ದುಕೊಂಡ ಟೀಂ ಇಂಡಿಯಾ ಸರಣಿಯನ್ನು 4-1 ಅಂತರದಿಂದ ತನ್ನದಾಗಿಸಿಕೊಂಡಿದೆ.
ಈ ಮೂಲಕ ನ್ಯೂಜಿಲೆಂಡ್ 14 ವರ್ಷಗಳ ಬಳಿಕ ತವರಿನಲ್ಲಿ ಹೀನಾಯ ಸರಣಿ ಸೋಲಿನ ಕಹಿ ಉಣಿಸಿದೆ. 253 ರನ್ ಗಳ ಗುರಿ ಬೆನ್ನತ್ತಿದ್ದ ನ್ಯೂಜಿಲೆಂಡ್ ಭಾರತೀಯ ಬೌಲರ್ ಗಳ ಸಂಘಟಿತ ಹೋರಾಟಕ್ಕೆ ತಲೆಬಾಗಿ 44.1 ಓವರ್ ಗಳಲ್ಲಿ 217 ರನ್ ಗಳಿಗೆ ಆಲೌಟ್ ಆಯಿತು.
ಭಾರತದ ಪರ ಯಜುವೇಂದ್ರ ಚಾಹಲ್ 3, ಭುವನೇಶ್ವರ್ ಕುಮಾರ್ 1, ಮೊಹಮ್ಮದ್ ಶಮಿ 2, ಹಾರ್ದಿಕ್ ಪಾಂಡ್ಯ 2 ಮತ್ತು ಕೇದಾರ್ ಜಾದವ್ 1 ವಿಕೆಟ್ ಪಡೆದರು. ಅತ್ಯುತ್ತಮ ಬ್ಯಾಟಿಂಗ್ ನಿರ್ವಹಣೆ ಮಾಡಿದ ಅಂಬಟಿ ರಾಯುಡು ಪಂದ್ಯ ಶ್ರೇಷ್ಠರಾದರು.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ