U19 Womens T20 World Cup: ಸತತ ಎರಡನೇ ಬಾರಿಗೆ ಅಂಡರ್ 19 ಟಿ20 ವಿಶ್ವಕಪ್ ಗೆದ್ದ ಭಾರತ ಮಹಿಳಾ ಕ್ರಿಕೆಟ್ ಪಡೆ

Krishnaveni K

ಭಾನುವಾರ, 2 ಫೆಬ್ರವರಿ 2025 (15:23 IST)
Photo Credit: X
ಕೌಲಾಲಂಪುರ: ಇಲ್ಲಿ ನಡೆದ ಅಂಡರ್ 19 ಮಹಿಳೆಯರ ಟಿ20 ವಿಶ್ವಕಪ್ ಫೈನಲ್ ನಲ್ಲಿ ದಕ್ಷಿಣ ಆಫ್ರಿಕಾವನ್ನು ಸದೆಬಡಿದ ಭಾರತೀಯ ತಂಡ ಸತತ ಎರಡನೇ ಬಾರಿಗೆ ವಿಶ್ವಕಪ್ ಕಿರೀಟ ತನ್ನದಾಗಿಸಿಕೊಂಡಿದೆ.

ಟಾಸ್ ಗೆದ್ದ ದಕ್ಷಿಣ ಆಫ್ರಿಕಾ ಮೊದಲು ಬ್ಯಾಟಿಂಗ್ ಆಯ್ದುಕೊಂಡಿತ್ತು. ಆದರೆ ಆರಂಭದಲ್ಲೇ ಭಾರತೀಯ ಬೌಲರ್ ಗಳ ಎದುರು ರನ್ ಗಳಿಸಲು ಆಫ್ರಿಕನ್ನರು ಪರದಾಡಿದರು. ಒಂದು ಹಂತದಲ್ಲಿ ನಾಲ್ಕು ಓವರ್ ಗಳಲ್ಲಿಯೇ 2 ವಿಕೆಟ್ ಕಳೆದುಕೊಂಡಿದ್ದ ಆಫ್ರಿಕಾ ಬಳಿಕ 20 ಓವರ್ ಗಳಲ್ಲಿ ಕೇವಲ 82 ರನ್ ಗಳಿಗೆ ಆಲೌಟ್ ಆಯಿತು.

ಈ ಮೊತ್ತ ಬೆನ್ನತ್ತಿದ ಭಾರತ ತಂಡ 11.2 ಓವರ್ ಗಳಲ್ಲಿಯೇ 1 ವಿಕೆಟ್ ಕಳೆದುಕೊಂಡು 84 ರನ್ ಗಳಿಸುವ ಮೂಲಕ ಜಯಭೇರಿ ಭಾರಿಸಿತು. ಗೊಂಗಾಡಿ ತ್ರಿಶಾ ಅಜೇಯ 44, ಸನಿಕಾ ಚಲ್ಕೆ ಅಜೇಯ 26 ರನ್ ಗಳಿಸಿದರು. ಈ ಸರಣಿಯುದ್ದಕ್ಕೂ ಉತ್ತಮ ಪ್ರದರ್ಶನ ನೀಡಿದ್ದ ಗೊಂಗಾಡಿ ತ್ರಿಶಾ ಪ್ಲೇಯರ್ ಆಫ್ ದಿ ಮ್ಯಾಚ್ ಜೊತೆಗೆ ಪ್ಲೇಯರ್ ಆಫ್ ದಿ ಟೂರ್ನಮೆಂಟ್ ಪ್ರಶಸ್ತಿಯನ್ನೂ ತಮ್ಮದಾಗಿಸಿಕೊಂಡರು.

ಈ ಗೆಲುವಿನೊಂದಿಗೆ ಭಾರತ ಸತತ ಎರಡನೇ ಬಾರಿಗೆ ಅಂಡರ್ 19 ವಿಶ್ವಕಪ್ ತನ್ನದಾಗಿಸಿಕೊಂಡಿತು. ಇದಕ್ಕೆ ಮೊದಲು ಕಳೆದ ಬಾರಿ ಶಫಾಲಿ ವರ್ಮ ನೇತೃತ್ವದ ತಂಡ ವಿಶ್ವಕಪ್ ಗೆದ್ದುಕೊಂಡಿತ್ತು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ