Women's T20 WC: ಏಷ್ಯಾ ಕಪ್ ಫೈನಲ್ ಸೋಲಿಗೆ ಸೇಡು ತೀರಿಸಿಕೊಳ್ಳಲು ಭಾರತ ತಂಡಕ್ಕೆ ಚಾನ್ಸ್

Krishnaveni K

ಬುಧವಾರ, 9 ಅಕ್ಟೋಬರ್ 2024 (10:23 IST)
ದುಬೈ: ಮಹಿಳೆಯರ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಇಂದು ಭಾರತ ಮತ್ತು ಶ್ರೀಲಂಕಾ ನಡುವೆ ಲೀಗ್ ಪಂದ್ಯ ನಡೆಯಲಿದೆ. ಭಾರತ ತಂಡಕ್ಕೆ ಈ ಪಂದ್ಯ ನಾಕೌಟ್ ಹಂತಕ್ಕೇರುವ ದೃಷ್ಟಿಯಿಂದ ಗೆಲ್ಲಲೇಬೇಕಾದ ಪಂದ್ಯವಾಗಿದೆ.

ಏಷ್ಯಾ ಕಪ್ ನಲ್ಲಿ ಈ ವರ್ಷ ಲೀಗ್ ಹಂತದಲ್ಲಿ ಎಲ್ಲಾ ಪಂದ್ಯಗಳನ್ನು ಗೆಲ್ಲುತ್ತಾ ಬಂದ ಭಾರತ ಫೈನಲ್ ನಲ್ಲಿ ಅತಿಥೇಯ ಶ್ರೀಲಂಕಾ ವಿರುದ್ಧ ಮುಗ್ಗರಿಸಿತ್ತು. ಹೀಗಾಗಿ ಲಂಕಾ ಎದುರು ಭಾರತ ತಂಡ ಎಚ್ಚರವಾಗಿರಲೇಬೇಕು. ಲಂಕಾ ವಿರುದ್ಧದ ಅಂದಿನ ಸೋಲಿಗೆ ಭಾರತಕ್ಕೆ ಸೇಡು ತೀರಿಸಿಕೊಳ್ಳಲು ಇಂದು ಉತ್ತಮ ಅವಕಾಶವಾಗಿದೆ.

ಮೊದಲ ಪಂದ್ಯದಲ್ಲೇ ನ್ಯೂಜಿಲೆಂಡ್ ವಿರುದ್ಧ ಸೋತಿದ್ದ ಹರ್ಮನ್ ಪ್ರೀತ್ ಕೌರ್ ಪಡೆ ಸಂಕಷ್ಟಕ್ಕೀಡಾಗಿದೆ. ಎರಡನೇ ಪಂದ್ಯದಲ್ಲಿ ಗೆಲುವು ಸಾಧಿಸಿದ್ದರೂ ನಾಕೌಟ್ ಹಂತಕ್ಕೇರಬೇಕಾದರೆ ಮುಂದಿನ ಎಲ್ಲಾ ಪಂದ್ಯಗಳನ್ನೂ ಭರ್ಜರಿ ಅಂತರದಿಂದ ಗೆಲ್ಲುವುದರ ಜೊತೆಗೆ ನ್ಯೂಜಿಲೆಂಡ್ ಸೋಲಿಗಾಗಿಯೂ ಪ್ರಾರ್ಥನೆ ನಡೆಸಬೇಕಾಗಿದೆ.

ಮೊದಲ ಪಂದ್ಯದಲ್ಲಿ ಎಲ್ಲಾ ವಿಭಾಗದಲ್ಲೂ ವಿಫಲರಾದರೂ ಕಳೆದ ಪಂದ್ಯದಲ್ಲಿ ಬ್ಯಾಟಿಂಗ್, ಬೌಲಿಂಗ್ ಎರಡರಲ್ಲೂ ಮಿಂಚಿತ್ತು. ಆದರೆ ಭಾರತದ ಪರಾಕ್ರಮ ದುರ್ಬಲ ತಂಡಗಳ ಮುಂದೆ ಮಾತ್ರ ಎಂಬ ಪರಿಸ್ಥಿತಿಯಾಗಿದೆ. ಲಂಕಾ ವಿರುದ್ಧ ಏಷ್ಯಾ ಕಪ್ ಸೋಲಿನ ಕಹಿನೆನಪು ಮರೆತು ಇಂದಿನ ಪಂದ್ಯದಲ್ಲಿ ಆಡಬೇಕಾಗಿದೆ. ಈ ಪಂದ್ಯ ಸಂಜೆ ಸಂಜೆ 7.30 ಕ್ಕೆ ಆರಂಭವಾಗಲಿದ್ದು, ಸ್ಟಾರ್ ಸ್ಪೋರ್ಟ್ಸ್ ವಾಹಿನಿ ಅಥವಾ ಹಾಟ್ ಸ್ಟಾರ್ ಆಪ್ ನಲ್ಲಿ ನೇರಪ್ರಸಾರ ವೀಕ್ಷಿಸಬಹುದಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ