ಬಾಂಗ್ಲಾದೇಶ ಟೂರ್ ಗೆ ಮುನ್ನ ರೋಹಿತ್, ದ್ರಾವಿಡ್ ಜೊತೆ ಬಿಸಿಸಿಐ ಮೀಟಿಂಗ್

ಮಂಗಳವಾರ, 29 ನವೆಂಬರ್ 2022 (08:30 IST)
ಮುಂಬೈ: ಬಾಂಗ್ಲಾದೇಶ ವಿರುದ್ಧ ಸರಣಿ ಆಡಲು ಪ್ರವಾಸ ಮಾಡುವ ಮುನ್ನ ಬಿಸಿಸಿಐ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಮತ್ತು ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಜೊತೆ ಸಭೆ ನಡೆಸಲಿದೆ.

ಮುಂಬರುವ ದಿನಗಳಲ್ಲಿ ಟೀಂ ಇಂಡಿಯಾದಲ್ಲಿ ಬಹು ನಾಯಕತ್ವ ಮತ್ತು ಕೋಚ್ ನೇಮಿಸುವ ಬಗ್ಗೆ ರೋಹಿತ್, ದ್ರಾವಿಡ್ ಜೊತೆ ಬಿಸಿಸಿಐ ಚರ್ಚಿಸಲು ತೀರ್ಮಾನಿಸಿದೆ.

ರೋಹಿತ್ ಶರ್ಮಾರನ್ನು ಟಿ20 ನಾಯಕತ್ವದಿಂದ ಹೊರಗಿಟ್ಟು ಹಾರ್ದಿಕ್ ಪಾಂಡ್ಯಗೆ ಪಟ್ಟ ಕಟ್ಟುವ ಬಗ್ಗೆ ಚಿಂತನೆ ನಡೆಸಲಾಗಿದೆ. ಇನ್ನು, ಟಿ20 ಕ್ರಿಕೆಟ್ ಗೆ ವಿವಿಎಸ್ ಲಕ್ಷ್ಮಣ್ ಅಥವಾ ಮಾಜಿ ನಾಯಕ ಧೋನಿಗೆ ಕೋಚಿಂಗ್ ಜವಾಬ‍್ಧಾರಿ ನೀಡಲು ಬಿಸಿಸಿಐ ತೀರ್ಮಾನಿಸಿದೆ. ಈ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳುವ ಮೊದಲು ರೋಹಿತ್, ದ್ರಾವಿಡ್ ಜೊತೆ ಚರ್ಚಿಸಲು ಸಭೆ ಕರೆಯಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ