ಸರಣಿ ಸಮಬಲಕ್ಕೆ ಟೀಂ ಇಂಡಿಯಾಗೆ ಕೊನೇ ಅವಕಾಶ: ಕೊನೇ ಪಂದ್ಯ ಯಾವಾಗ?

ಸೋಮವಾರ, 28 ನವೆಂಬರ್ 2022 (09:30 IST)
Photo Courtesy: Twitter
ಕ್ರಿಸ್ಟ್ ಚರ್ಚ್: ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಏಕದಿನ ಸರಣಿಯ ಎರಡನೇ ಪಂದ್ಯ ಮಳೆಯಿಂದಾಗಿ ರದ್ದಾಗಿರುವುದರಿಂದ ಮೂರನೇ ಪಂದ್ಯದಲ್ಲಿ ಸರಣಿ ಸಮಬಲಗೊಳಿಸಲು ಟೀಂ ಇಂಡಿಯಾಗೆ ಅವಕಾಶ ಸಿಕ್ಕಿದೆ.

ಮೊದಲ ಪಂದ್ಯವನ್ನು ಟೀಂ ಇಂಡಿಯಾ ಸೋತಿತ್ತು. ಹೀಗಾಗಿ ಎರಡನೇ ಪಂದ್ಯದಲ್ಲಿ ಗೆದ್ದು ಸರಣಿ ಸಮಬಲಗೊಳಿಸಲು ಅವಕಾಶವಿತ್ತು. ಆದರೆ ಇದು ಮಳೆಯಿಂದಾಗಿ ರದ್ದಾಗಿತ್ತು. ಹೀಗಾಗಿ ಈಗ ಅಂತಿಮ ಪಂದ್ಯವನ್ನು ಗೆಲ್ಲುವ ಒತ್ತಡಕ್ಕೆ ಸಿಲುಕಿದೆ.

ಈ ಪಂದ್ಯ ಬುಧವಾರ ನಡೆಯಲಿದ್ದು, ಈ ಪಂದ್ಯವನ್ನು ಗೆದ್ದರೆ ಮಾತ್ರ ಸರಣಿ ಸಮಬಗೊಳಿಸಬಹುದಾಗಿದೆ. ಸೋತರೆ ಅಥವಾ ಮಳೆಯಿಂದಾಗಿ ರದ್ದಾದರೆ ನ್ಯೂಜಿಲೆಂಡ್ ಸರಣಿ ಗೆಲ್ಲಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ