ಲಂಡನ್: ಯುವರಾಜ್ ಸಿಂಗ್ ಅವರ ಯುವಿ ಕ್ಯಾನ್ ಫೌಂಡೇಷನ್ ಕಾರ್ಯಕ್ರಮದಲ್ಲಿ ಎದುರಾದ ಸಾರಾ ತೆಂಡುಲ್ಕರ್ ನನ್ನು ಶುಭಮನ್ ಗಿಲ್ ಮಾತನಾಡಿಸುತ್ತಿದ್ದರೆ ಇತ್ತ ರವೀಂದ್ರ ಜಡೇಜಾ ಆಂಡ್ ಗ್ಯಾಂಗ್ ಹಿಂದೆ ಕುಳಿತುಕೊಂಡು ಟೀಸ್ ಮಾಡುತ್ತಿರುವ ಫನ್ನಿ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಶುಭಮನ್ ಗಿಲ್ ಮತ್ತು ಸಚಿನ್ ತೆಂಡುಲ್ಕರ್ ಪುತ್ರಿ ಸಾರಾ ಡೇಟಿಂಗ್ ಮಾಡುತ್ತಿದ್ದರು ಎಂಬ ವದಂತಿಗಳಿತ್ತು. ಇದೇ ಕಾರಣಕ್ಕೆ ಶುಭಮನ್ ರನ್ನು ಅಭಿಮಾನಿಗಳೂ ಕಾಲೆಳೆಯುತ್ತಲೇ ಇರುತ್ತಾರೆ. ಮೊನ್ನೆ ಯುವರಾಜ್ ಸಿಂಗ್ ಕಾರ್ಯಕ್ರಮದಲ್ಲಿ ಇಬ್ಬರೂ ಮುಖಾಮುಖಿಯಾಗಿದ್ದೇದೊಡ್ಡ ಸುದ್ದಿಯಾಗಿತ್ತು.
ಅದೇ ಕಾರ್ಯಕ್ರಮದಲ್ಲಿ ನಡೆದು ಇನ್ನೊಂದು ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಸಾರಾ ತಮ್ಮ ತಂದೆ ಸಚಿನ್ ಮತ್ತು ತಾಯಿ ಅಂಜಲಿ ಜೊತೆ ಕಾರ್ಯಕ್ರಮಕ್ಕೆ ಬಂದಿದ್ದರು. ಇದೇ ಕಾರ್ಯಕ್ರಮಕ್ಕೆ ಗಿಲ್ ಕೂಡಾ ತಂಡದ ಜೊತೆ ಬಂದಿದ್ದರು.
ಸಾರಾರನ್ನು ಶುಭಮನ್ ಗಿಲ್ ಮಾತನಾಡಿಸುತ್ತಿದ್ದರೆ ಸ್ವಲ್ಪ ಈಚೆ ಕೂತಿದ್ದ ರವೀಂದ್ರ ಜಡೇಜಾ, ಕೆಎಲ್ ರಾಹುಲ್ ಸೇರಿದಂತೆ ಕ್ರಿಕೆಟಿಗರು ಅವರ ಕಡೆ ನೋಡಿ ಟೀಸ್ ಮಾಡುತ್ತಿದ್ದುದು ಕಂಡುಬಂದಿದೆ. ಈ ಫನ್ನಿ ವಿಡಿಯೋ ಇಲ್ಲಿದೆ ನೋಡಿ.