ಇಂಗ್ಲೆಂಡ್ ಫುಟ್ಬಾಲ್ ತಂಡಕ್ಕೂ ವಿರಾಟ್ ಕೊಹ್ಲಿಯೇ ಲಕ್ಕಿ ಚಾರ್ಮ್!
ಭಾನುವಾರದ ಪಂದ್ಯಕ್ಕೆ ಮೊದಲು ಇಂಗ್ಲೆಂಡ್ ತಂಡದ ನಾಯಕ ಹ್ಯಾರಿ ಕೇನ್ ಗೆ ವಿರಾಟ್ ಕೊಹ್ಲಿ ಟ್ವಿಟರ್ ಮೂಲಕ ಶುಭಾಷಯ ಕೋರಿದ್ದರು. ಅದೃಷ್ಟವಶಾತ್ ಈ ಪಂದ್ಯದಲ್ಲಿ ಕೇನ್ 2 ಗೋಲು ಭಾರಿಸಿದ್ದಲ್ಲದೆ ಗೆಲುವಿನ ರೂವಾರಿಯಾಗಿದ್ದರು.
ಹೀಗಾಗಿ ಪಂದ್ಯದ ನಂತರ ಕೇನ್ ಟ್ವಿಟರ್ ನಲ್ಲಿ ಕೊಹ್ಲಿಗೆ ಧನ್ಯವಾದ ಸಲ್ಲಿಸಿದ್ದಲ್ಲದೆ, ಅತೀ ಒತ್ತಡದ ಸಂದರ್ಭಗಳಲ್ಲಿ ಏನು ಮಾಡಬೇಕೆಂದು ವಿರಾಟ್ ಕೊಹ್ಲಿ ಹೇಳಿಕೊಡುತ್ತಾರೆ ಮತ್ತು ಅದನ್ನು ಅವರು ಆಗಾಗ ಮಾಡುತ್ತಲೇ ಇರುತ್ತಾರೆ ಎಂದಿದ್ದರು. ಇದನ್ನು ನೋಡಿ ಕೊಹ್ಲಿ ಪ್ರತಿಕ್ರಿಯೆ ನೀಡಿದ್ದು ಇಂಗ್ಲೆಂಡ್ ನಾಯಕನಿಗೆ ಧನ್ಯವಾದ ಸಲ್ಲಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.