ವಿಶ್ವಕಪ್ ಗೆಲುವಿನ ಬಳಿಕ ಒಂದೇ ಒಂದು ಪೋಸ್ಟ್ ನಿಂದ ದಾಖಲೆ ಮಾಡಿದ ವಿರಾಟ್ ಕೊಹ್ಲಿ

Krishnaveni K

ಸೋಮವಾರ, 1 ಜುಲೈ 2024 (10:07 IST)
Photo Credit: Instagram
ಬಾರ್ಬಡೋಸ್: ಟಿ20 ವಿಶ್ವಕಪ್ ಗೆಲುವಿನ ಬಳಿಕ ಟೀಂ ಇಂಡಿಯಾ ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ ಮಾಡಿದ ಒಂದೇ ಒಂದು ಸೋಷಿಯಲ್ ಮೀಡಿಯಾ ಪೋಸ್ಟ್ ಈಗ ದಾಖಲೆ ಮಾಡಿದೆ.

ವಿಶ್ವಕಪ್ ಗೆಲುವಿನ ಬಳಿಕ ಎಲ್ಲಾ ಆಟಗಾರರ ಕಣ್ಣಲ್ಲೂ ನೀರಿತ್ತು. ಪ್ರತಿಯೊಬ್ಬರೂ ಭಾವುಕರಾಗಿದ್ದರು. ಅದಕ್ಕೆ ವಿರಾಟ್ ಕೊಹ್ಲಿ ಕೂಡಾ ಹೊರತಾಗಿರಲಿಲ್ಲ. ಅದರಲ್ಲೂ ವಿಶ್ವಕಪ್ ಎತ್ತಿ ಸಂಭ್ರಮಿಸುವಾಗ ಅವರು ತೀರಾ ಭಾವುಕರಾಗಿದ್ದರು. ಡ್ರೆಸ್ಸಿಂಗ್ ರೂಂಗೆ ಬಂದ ಮೇಲೆ ಭಾರತದ ಧ್ವಜ ಮೈಗೆ ಸುತ್ತಿಕೊಂಡು ವಿಶ್ವಕಪ್ ಟ್ರೋಫಿ ಎತ್ತಿ ಹಿಡಿದು ಅದಕ್ಕೆ ಚುಂಬಿಸುವ ಫೋಟೋವೊಂದನ್ನು ಕೊಹ್ಲಿ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಪ್ರಕಟಿಸಿದ್ದರು.

ಈ ಪೋಸ್ಟ್ ಈಗ ದಾಖಲೆ ಮಾಡಿದೆ. ಫೋಟೋ ಜೊತೆಗೆ ಕೊಹ್ಲಿ ಇದಕ್ಕಿಂದ ಒಳ್ಳೆಯ ದಿನ ಕಾಣಲು ಸಾಧ್ಯವಿಲ್ಲ. ದೇವರು ದೊಡ್ಡವನು ನಾನು ಕೃತಜ್ಞತೆಯಿಂದ ತಲೆಬಾಗುತ್ತೇನೆ. ಕೊನೆಗೂ ನಾವು ಇದನ್ನು ಸಾಧಿಸಿಯೇ ಬಿಟ್ಟೆವು ಎಂದು ಕೊಹ್ಲಿ ಬರೆದುಕೊಂಡಿದ್ದರು.

ಈ ಪೋಸ್ಟ್ ಗೆ 1 ಕೋಟಿ 83 ಲಕ್ಷಕ್ಕೂ ಅಧಿಕ ಲೈಕ್ಸ್ ಬಂದಿವೆ. ಈ ಮೂಲಕ ಭಾರತದಲ್ಲಿ ಸೋಷಿಯಲ್ ಮೀಡಿಯಾ ಪೋಸ್ಟ್ ಒಂದಕ್ಕೆ ಅತೀ ಹೆಚ್ಚು ಲೈಕ್ಸ್ ಪಡೆದ ದಾಖಲೆ ಮಾಡಿದ್ದಾರೆ. ಇದಕ್ಕೆ ಮೊದಲು ಕಿಯಾರ ಅಡ್ವಾಣಿ, ಸಿದ್ಧಾರ್ಥ್ ಮಲ್ಹೋತ್ರಾ ಮದುವೆ ಫೋಟೋಗೆ 1 ಕೋಟಿ 40 ಲಕ್ಷ ಲೈಕ್ಸ್ ಬಂದಿದ್ದೇ ದಾಖಲೆಯಾಗಿತ್ತು.  ವಿಶೇಷವೆಂದರೆ ಕೊಹ್ಲಿ ಪೋಸ್ಟ್ ಗೆ ಫುಟ್ಬಾಲ್ ದಿಗ್ಗಜ ಜೂಡ್ ಬೆಲ್ಲಿಂಗ್ ಹ್ಯಾಮ್, ವಿನಿಶಿಯಸ್ ಜ್ಯೂನಿಯರ್ ಸೇರಿದಂತೆ ಘಟಾನುಘಟಿಗಳು ಈ ಪೋಸ್ಟ್ ಗೆ ಲೈಕ್ ಮಾಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ