ರಾಹುಲ್ ದ್ರಾವಿಡ್, ಕಪಿಲ್ ದೇವ್ ಸಾಲಿಗೆ ಸೇರುವ ಸುವರ್ಣಾವಕಾಶ ವಿರಾಟ್ ಕೊಹ್ಲಿಗೆ!

ಭಾನುವಾರ, 22 ಜುಲೈ 2018 (09:31 IST)
ಲಂಡನ್: ಇಂಗ್ಲೆಂಡ್ ನಲ್ಲಿ ಇಂಗ್ಲೆಂಡ್ ಸೋಲಿಸುವುದು ಅಷ್ಟು ಸುಲಭವಲ್ಲ. ಆದರೆ ಆಂಗ್ಲರ ನೆಲದಲ್ಲಿ ಟೆಸ್ಟ್ ಸರಣಿ ಗೆದ್ದ ಟೀಂ ಇಂಡಿಯಾ ನಾಯಕರ ಸಾಲಿಗೆ ಸೇರಲು ವಿರಾಟ್ ಕೊಹ್ಲಿಗೆ ಅಪೂರ್ವ ಅವಕಾಶ ಎದುರಾಗಿದೆ.

ಮುಂಬರುವ ಟೆಸ್ಟ್ ಸರಣಿಯಲ್ಲಿ ಟೀಂ ಇಂಡಿಯಾ ಗೆದ್ದುಕೊಂಡರೆ ಕಪಿಲ್ ದೇವ್, ಅಜಿತ್ ವಾಡೇಕರ್ ಮತ್ತು ರಾಹುಲ್ ದ್ರಾವಿಡ್ ನಂತರ ಆಂಗ್ಲರ ನೆಲದಲ್ಲಿ ಟೆಸ್ಟ್ ಸರಣಿ ಗೆದ್ದ ನಾಯಕರ ಸಾಲಿಗೆ ಸೇರ್ಪಡೆಯಾಗಲಿದ್ದಾರೆ.

ಅಜಿತ್ ವಾಡೇಕರ್ 1971 ರಲ್ಲಿ, ಕಪಿಲ್ ದೇವ್ 1986 ರಲ್ಲಿ ಮತ್ತು ರಾಹುಲ್ ದ್ರಾವಿಡ್ 2007 ರಲ್ಲಿ ಸರಣಿ ಗೆದ್ದಿದ್ದರು. ಆಗಸ್ಟ್ 1 ರಿಂದ ಭಾರತ ಮತ್ತು ಇಂಗ್ಲೆಂಡ್ ನಡುವೆ ಮೊದಲ ಟೆಸ್ಟ್ ಪಂದ್ಯ ನಡೆಯಲಿದೆ. ಅದಕ್ಕೂ ಮೊದಲು ಜುಲೈ 25 ರಿಂದ ಟೀಂ ಇಂಡಿಯಾ ಎಸೆಕ್ಸ್ ಎದುರು ಅಭ್ಯಾಸ ಪಂದ್ಯವಾಡಲಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.             

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ