ಬೆಂಗಳೂರು ಟೆಸ್ಟ್ ಸೋತ ಬೆನ್ನಲ್ಲೇ ಭಜನೆ ಮಾಡುತ್ತಾ ಕುಳಿತ ವಿರಾಟ್ ಕೊಹ್ಲಿ ವಿಡಿಯೋ ವೈರಲ್

Krishnaveni K

ಮಂಗಳವಾರ, 22 ಅಕ್ಟೋಬರ್ 2024 (10:51 IST)
Photo Credit: X
ಮುಂಬೈ: ನ್ಯೂಜಿಲೆಂಡ್ ವಿರುದ್ಧ ಬೆಂಗಳೂರು ಟೆಸ್ಟ್ ಸೋತ ಬಳಿಕ ಟೀಂ ಇಂಡಿಯಾ ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ ನೇರವಾಗಿ ಮುಂಬೈಗೆ ತೆರಳಿದ್ದು, ಪತ್ನಿ ಜೊತೆಗೆ ಭಜನೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ.

ಬೆಂಗಳೂರು ಟೆಸ್ಟ್ ಸೋತ ಬಳಿಕ ಕೊಹ್ಲಿ ಮುಖಕ್ಕೆ ಮಾಸ್ಕ್ ಹಾಕಿಕೊಂಡು ಯಾರೂ ಗುರುತು ಹಿಡಿಯದಂತೆ ಬೆಂಗಳೂರು ವಿಮಾನ ನಿಲ್ದಾಣದಿಂದ ಮುಂಬೈ ವಿಮಾನವೇರಿದ್ದರು. ಅವರ ಈ ವಿಡಿಯೋವೂ ವೈರಲ್ ಆಗಿತ್ತು. ಅದರ ಬೆನ್ನಲ್ಲೇ ಈಗ ಪತ್ನಿ ಅನುಷ್ಕಾ ಶರ್ಮಾ ಜೊತೆ ಮುಂಬೈನಲ್ಲಿ ಕಾಣಿಸಿಕೊಂಡಿದ್ದಾರೆ.

ವಿರಾಟ್ ಕೊಹ್ಲಿ ದಂಪತಿ ಖ್ಯಾತ ಭಜನ್ ಕಲಾವಿದ ಕೃಷ್ಣದಾಸ್ ಅವರ ಅಭಿಮಾನಿಗಳು. ಲಂಡನ್ ನಲ್ಲಿ ಎರಡು ಬಾರಿ ಅವರ ಭಜನೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಫೋಟೋ, ವಿಡಿಯೋಗಳು ವೈರಲ್ ಆಗಿತ್ತು. ಇದೀಗ ಮುಂಬೈನಲ್ಲಿ ಕೃಷ್ಣದಾಸ್ ಅವರ ಕೀರ್ತನೆ ಕಾರ್ಯಕ್ರಮ ನಡೆದಿದ್ದು, ಆ ಕಾರ್ಯಕ್ರಮದಲ್ಲಿಕೊಹ್ಲಿ ದಂಪತಿ ಭಾಗಿಯಾಗಿದ್ದಾರೆ.

ಮೊದಲ ಸಾಲಿನಲ್ಲೇ ಕುಳಿತು ಅನುಷ್ಕಾ ಜೊತೆ ಭಕ್ತಿಪರವಶರಾಗಿ ಭಜನೆ ಹಾಡುವ ವಿಡಿಯೋಗಳು ವೈರಲ್ ಆಗಿದೆ. ಇತ್ತೀಚೆಗೆ ಕೊಹ್ಲಿ ಆಧ್ಯಾತ್ಮಿಕ ಕಾರ್ಯಕ್ರಮಗಳತ್ತ ಒಲವು ತೋರುತ್ತಿದ್ದಾರೆ ಎಂಬುದಕ್ಕೆ ಇದೇ ಸಾಕ್ಷಿ. ಅಕ್ಟೋಬರ್ 24 ರಿಂದ ಎರಡನೇ ಟೆಸ್ಟ್ ಪಂದ್ಯ ಆರಂಭವಾಗಲಿದೆ. ಅಷ್ಟರಲ್ಲಿ ಮತ್ತೆ ಅವರು ತಂಡವನ್ನು ಕೂಡಿಕೊಳ್ಳಲಿದ್ದಾರೆ.

Virat Kohli and Anushka Sharma enjoying the Krishna Das Kirtan event in Mumbai. ????❤️pic.twitter.com/8NtWLlNuos

— Mufaddal Vohra (@mufaddal_vohra) October 21, 2024

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ