ವಿಶ್ವಕಪ್ ಸೋತಿದ್ದಕ್ಕೆ ಆಯ್ಕೆಸಮಿತಿಗೆ ಶಿಕ್ಷೆ: ಕರ್ಮ ಬಿಡಲ್ಲ ಎಂದು ಕೊಹ್ಲಿ ಅಭಿಮಾನಿಗಳಿಂದ ಟಾಂಗ್

ಶನಿವಾರ, 19 ನವೆಂಬರ್ 2022 (09:10 IST)
Photo Courtesy: Twitter
ಮುಂಬೈ: ಟೀಂ ಇಂಡಿಯಾ ಟಿ20 ವಿಶ್ವಕಪ್ ಸೋತ ಬೆನ್ನಲ್ಲೇ ಬಿಸಿಸಿಐ ಚೇತನ್ ಶರ್ಮಾ ನೇತೃತ್ವದ ಆಯ್ಕೆ ಸಮಿತಿಯನ್ನು ಕಿತ್ತು ಹಾಕಿದೆ. ಇದಕ್ಕೆ ಕೊಹ್ಲಿ ಅಭಿಮಾನಿಗಳು ಸಂಭ್ರಮಾಚರಿಸಿದ್ದಾರೆ.

ವಿರಾಟ್ ಕೊಹ್ಲಿಯನ್ನು ಏಕದಿನ ಮತ್ತು ಟೆಸ್ಟ್ ನಾಯಕತ್ವದಿಂದ ಪದಚ್ಯುತಿಗೊಳಿಸಲು ಇದೇ ಆಯ್ಕೆ ಸಮಿತಿ ಕಾರಣ ಎಂಬುದು ಕೊಹ್ಲಿ ಅಭಿಮಾನಿಗಳ ನಂಬಿಕೆ.

ಇದೀಗ ಆಯ್ಕೆ ಸಮಿತಿಯನ್ನು ಕಿತ್ತು ಹಾಕಿದ ಬೆನ್ನಲ್ಲೇ ಪ್ರತಿಕ್ರಿಯಿಸಿರುವ ಕೊಹ್ಲಿ ಅಭಿಮಾನಿಗಳು ಕರ್ಮ ತಿರುಗಿ ನಿಮ್ಮನ್ನೇ ಆಹುತಿ ಪಡೆಯದೇ ಬಿಡಲ್ಲ ಎನ್ನುವುದಕ್ಕೆ ಇದೇ ಉದಾಹರಣೆ ಎಂದು ಮೆಮೆಗಳ ಮೂಲಕ ಟ್ರೋಲ್ ಮಾಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ