ಚಿನ್ನಸ್ವಾಮಿ ಅಂಗಣದಲ್ಲಿ ಆರ್ ಸಿಬಿ ಪ್ರೇಕ್ಷಕರೆದುರು ವಿರಾಟ್ ಕೊಹ್ಲಿ 100 ನೇ ಟೆಸ್ಟ್ ಪಂದ್ಯ!
ಕೊಹ್ಲಿ ಈ ಪಂದ್ಯವಾಡಿದ್ದರೆ ದ.ಆಫ್ರಿಕಾ ವಿರುದ್ಧ ನಡೆಯಲಿರುವ ಮೂರನೇ ಟೆಸ್ಟ್ ಪಂದ್ಯ ಅವರ ಪಾಲಿಗೆ 100 ನೇ ಟೆಸ್ಟ್ ಪಂದ್ಯವಾಗಿರುತ್ತಿತ್ತು. ಆದರೆ ಇದೀಗ 100 ನೇ ಟೆಸ್ಟ್ ಪಂದ್ಯ ಕೊಹ್ಲಿ ನೆಚ್ಚಿನ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಡುವ ಅದೃಷ್ಟ ಒದಗಿಬಂದಿದೆ.
ಐಪಿಎಲ್ ನ ಆರ್ ಸಿಬಿ ತಂಡದಿಂದಾಗಿ ಕೊಹ್ಲಿಗೆ ಬೆಂಗಳೂರಿನ ಮೇಲೆ ವಿಶೇಷ ಪ್ರೀತಿ. ಹಾಗೆಯೇ ಇಲ್ಲಿನ ಅಭಿಮಾನಿಗಳಿಗೂ ಕೊಹ್ಲಿಯೆಂದರೆ ಅಷ್ಟೇ ಅಭಿಮಾನ. ಇದೀಗ ಫೆಬ್ರವರಿ 28 ರಂದು ಶ್ರೀಲಂಕಾ ವಿರುದ್ಧ ಬೆಂಗಳೂರಿನಲ್ಲಿ ನಡೆಯಲಿರುವ ಮೊದಲ ಟೆಸ್ಟ್ ಪಂದ್ಯ ಕೊಹ್ಲಿ ಪಾಲಿಗೆ 100 ನೇ ಟೆಸ್ಟ್ ಪಂದ್ಯವಾಗಲಿದೆ. ಆ ಮೂಲಕ ಆರ್ ಸಿಬಿ ತವರಿನಲ್ಲೇ ವಿಶೇಷ ಪಂದ್ಯವಾಡುವ ಗೌರವ ಕೊಹ್ಲಿಯದ್ದಾಗಲಿದೆ. ಇನ್ನೂ ಒಂದು ವಿಶೇಷವೆಂದರೆ ಆರ್ ಸಿಬಿ ಗೆಳೆಯ ಎಬಿಡಿ ವಿಲಿಯರ್ಸ್ ಕೂಡಾ ಇದೇ ಅಂಗಣದಲ್ಲಿ 100 ನೇ ಟೆಸ್ಟ್ ಪಂದ್ಯವಾಡಿದ್ದರು.