ಸಹ ಆಟಗಾರರಿಗೆ ನೀರು ಸರಬರಾಜು ಮಾಡಿದ ವಿರಾಟ್ ಕೊಹ್ಲಿ
ಮೊದಲ ಏಕದಿನ ಪಂದ್ಯದಲ್ಲಿ ಆಡಿದ್ದರೂ ಕೊಹ್ಲಿಗೆ ಬ್ಯಾಟಿಂಗ್ ಅವಕಾಶ ಸಿಗಲಿಲ್ಲ. ಎರಡನೇ ಏಕದಿನ ಪಂದ್ಯದಲ್ಲಿ ಕೊಹ್ಲಿ ನಾಯಕ ರೋಹಿತ್ ಶರ್ಮಾ ಜೊತೆ ವಿಶ್ರಾಂತಿ ಪಡೆದಿದ್ದರು.
ಹೀಗಾಗಿ ಕೊಹ್ಲಿ ತಮ್ಮ ಸಹ ಆಟಗಾರರಿಗೆ ಸಾಮಾನ್ಯರಂತೇ ನೀರು ಸರಬರಾಜು ಮಾಡುವ ಕಾಯಕದಲ್ಲಿ ತೊಡಗಿಸಿಕೊಂಡಿದ್ದಾರೆ. ಅವರಿಗೆ ಮತ್ತೊಬ್ಬ ಆಟಗಾರ ಯಜುವೇಂದ್ರ ಚಾಹಲ್ ಸಾಥ್ ಕೊಟ್ಟಿದ್ದಾರೆ. ನಿನ್ನೆಯ ಏಕದಿನ ಪಂದ್ಯವನ್ನು ಟೀಂ ಇಂಡಿಯಾ 6 ವಿಕೆಟ್ ಗಳಿಂದ ಸೋತಿತ್ತು.