ನವದೆಹಲಿ: ರಾಜಸ್ಥಾನ ರಾಯಲ್ಸ್ ವಿರುದ್ಧದ 2024 ರ ಎಲಿಮಿನೇಟರ್ ಸ್ಪರ್ಧೆಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸಜ್ಜಾಗುತ್ತಿರುವ ಬೆನ್ನಲ್ಲಿ ವಿರಾಟ್ ಕೊಹ್ಲಿ ಅವರಿಗೆ ಬೆದರಿಕೆ ಹಿನ್ನೆಲೆ ಭದ್ರತೆ ದೃಷ್ಟಿಯಿಂದ ತನ್ನ ಅಭ್ಯಾಸವನ್ನು ರದ್ದುಗೊಳಿಸಿತು.
ಬುಧವಾರದ ಎಲಿಮಿನೇಟರ್‌ಗೂ ಮುನ್ನ ಮಂಗಳವಾರ ಅಹಮದಾಬಾದ್‌ನ ಗುಜರಾತ್ ಕಾಲೇಜು ಮೈದಾನದಲ್ಲಿ ಆರ್‌ಸಿಬಿ ಅಭ್ಯಾಸ ನಡೆಸಬೇಕಿತ್ತು. ಆದರೆ ವಿರಾಟ್ ಕೊಹ್ಲಿ ಅವರಿಗೆ ಬೆದರಿಕೆಯಿದ್ದ ಕಾರಣ ಭದ್ರತೆಯ ಬಗ್ಗೆ ಆತಂಕದಲ್ಲಿ ಅಭ್ಯಾಸವನ್ನು ರದ್ದು ಮಾಡಲಾಯಿತು.
ಆನಂದಬಜಾರ್ ಪತ್ರಿಕಾ ಪ್ರಕಾರ, ಭದ್ರತಾ ಬೆದರಿಕೆಯಿಂದಾಗಿ ರಾಯಲ್ಸ್ ವಿರುದ್ಧದ ಎಲಿಮಿನೇಟರ್ ಪಂದ್ಯದ ಮುನ್ನಾದಿನದಂದು ಫ್ರಾಂಚೈಸ್ ಪತ್ರಿಕಾಗೋಷ್ಠಿಯನ್ನು ಸಹ ನಡೆಸಲಿಲ್ಲ, ಅಸಾಮಾನ್ಯ ಬೆಳವಣಿಗೆಯ ಬಗ್ಗೆ ಅನೇಕರು ಅಸಮಾಧಾನಗೊಂಡಿದ್ದಾರೆ.
ವರದಿಯ ಪ್ರಕಾರ, ಅಭ್ಯಾಸವನ್ನು ರದ್ದು ಮಾಡಲು ಪ್ರಾಥಮಿಕ ತನಿಖೆಯಲ್ಲಿ ವಿರಾಟ್ ಅವರಿಗೆ ಜೀವಬೆದೆರಿಕೆಯಾಗಿದೆ. ಈ ಸಂಬಂಧ ಭಯೋತ್ಪಾದನಾ ಚಟುವಟಿಕೆಯ ಶಂಕೆಯ ಮೇಲೆ ಅಹಮದಾಬಾದ್‌ನ 4 ಜನರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ವರದಿಯಾಗಿದೆ.
ವಿರಾಟ್ ಕೊಹ್ಲಿ ಅವರು ನಮ್ಮ ದೇಶದ ಸಂಪತ್ತು. ಅವರಿಗೆ ಭದ್ರತೆ ನೀಡುವುದು ನಮ್ಮ ಅತ್ಯಂತ ಆದ್ಯತೆಯಾಗಿದೆ ಎಂದು ಪೊಲೀಸ್ ಅಧಿಕಾರಿ ವಿಜಯ್ ಸಿಂಘ ಜ್ವಾಲಾ ಹೇಳಿದ್ದಾರೆ. "
ಈ ಬಗ್ಗೆ ಆರ್‌ಸಿಬಿ ಹಾಗೂ ರಾಜಸ್ಥಾನ ರಾಯಲ್ಸ್‌ಗೆ ಮಾಹಿತಿ ನೀಡಲಾಯಿತು. ಆರ್‌ಸಿಬಿ ರಿಸ್ಕ್ ತೆಗೆದುಕೊಳ್ಳಲು ಬಯಸಲಿಲ್ಲ. ಯಾವುದೇ ಅಭ್ಯಾಸದ ಅವಧಿ ಇರುವುದಿಲ್ಲ ಎಂದು ಅವರು ನಮಗೆ ತಿಳಿಸಿದರು. ರಾಜಸ್ಥಾನ್ ರಾಯಲ್ಸ್‌ನ ಬೆಳವಣಿಗೆಯ ಬಗ್ಗೆಯೂ ತಿಳಿಸಲಾಯಿತು, ಆದರೆ ಅವರು ತಮ್ಮ ಅಭ್ಯಾಸದಲ್ಲಿ ಮುಂದುವರಿಯಲು ಯಾವುದೇ ತೊಂದರೆಗಳಿಲ್ಲ."
ಭದ್ರತೆ ದೃಷ್ಟಿಯಿಂದ ಆರ್‌ಸಿಬಿಯ ಟೀಮ್ ಹೋಟೆಲ್‌ನ ಹೊರಗೆ ಪೊಲೀಸರು ಹೆಚ್ಚಿನ ಭದ್ರತಾ ವ್ಯವಸ್ಥೆಯನ್ನು ಬಲಪಡಿಸಿದ್ದಾರೆ. ಐಪಿಎಲ್ ಮಾನ್ಯತೆ ಪಡೆದ ಸದಸ್ಯರಿಗೂ ತಂಡದ ಹೋಟೆಲ್‌ಗೆ ಪ್ರವೇಶಿಸಲು ಅವಕಾಶ ನೀಡಲಿಲ್ಲ ಎಂದು ವರದಿಯಾಗಿದೆ.