ಕೊಹ್ಲಿ ಅನುಪಸ್ಥಿತಿಯಲ್ಲಿ ಭಾರತ ತಂಡದ ನಾಯಕತ್ವ ಯಾರಿಗೆ?

ಮಂಗಳವಾರ, 11 ಮೇ 2021 (09:53 IST)
ಮುಂಬೈ: ಶ್ರೀಲಂಕಾ ವಿರುದ್ಧ ಕ್ರಿಕೆಟ್ ಸರಣಿ ಆಡಲು ತೆರಳಲಿರುವ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾಗೆ ವಿಶ್ರಾಂತಿ ನೀಡಲಿದೆ. ಹಾಗಿದ್ದರೆ ಭಾರತ ತಂಡವನ್ನು ಮುನ್ನಡೆಸುವವರು ಯಾರು?


ನಾಯಕತ್ವಕ್ಕೆ ಕೆಎಲ್ ರಾಹುಲ್, ಶಿಖರ್ ಧವನ್ ನಡುವೆ ಪೈಪೋಟಿಯಿದೆ. ಈ ಪೈಕಿ ನಾಯಕರಾಗಿ ಕೆಎಲ್ ರಾಹುಲ್ ಗೆ ಹೆಚ್ಚಿನ ಅನುಭವವಿದೆ. ಹೀಗಾಗಿ ಅವರೇ ನಾಯಕರಾಗುವ ಸಾಧ‍್ಯತೆ ಹೆಚ್ಚು.

ಇನ್ನು, ಯುವ ಆಟಗಾರನಿಗೆ ಪಟ್ಟ ಕಟ್ಟುವ ತೀರ್ಮಾನ ತೆಗೆದುಕೊಂಡರೆ ರಿಷಬ್ ಪಂತ್ ಕೂಡಾ ರೇಸ್ ನಲ್ಲಿರಲಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ನಾಯಕರಾಗಿ ಅನುಭವ ಪಡೆದಿರುವ ರಿಷಬ್ ಗೆ ಭವಿಷ್ಯದ ದೃಷ್ಟಿಯಿಂದ ನಾಯಕತ್ವ ಕೊಟ್ಟರೂ ಅಚ್ಚರಿಯಿಲ್ಲ. ಅಂತೂ ಈ ಸರಣಿಯಲ್ಲಿ ನಾಯಕರಾಗಿ ಸೈ ಎನಿಸಿಕೊಂಡ ಆಟಗಾರ ಭವಿಷ್ಯದಲ್ಲಿ ಭಾರತ ತಂಡಕ್ಕೆ ನಾಯಕರಾಗಬಹುದು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ