ದ್ರಾವಿಡ್ ಬರೋವರೆಗೂ ಟೀಂ ಇಂಡಿಯಾಕ್ಕೆ ವಿವಿಎಸ್ ಲಕ್ಷ್ಮಣ್ ಕೋಚ್
ಹೀಗಾಗಿ ಅವರು ಟೀಂ ಇಂಡಿಯಾ ಏಷ್ಯಾ ಕಪ್ ತಂಡದ ಜೊತೆ ದುಬೈಗೆ ತೆರಳಲಿಲ್ಲ. ಇದೀಗ ದ್ರಾವಿಡ್ ಮತ್ತೆ ಸೋಂಕಿನಿಂದ ಗುಣಮುಖರಾಗಿ ನೆಗೆಟಿವ್ ವರದಿ ಬಂದ ಬಳಿಕವಷ್ಟೇ ತಂಡವನ್ನು ಕೂಡಿಕೊಳ್ಳಬಹುದಾಗಿದೆ. ಹೀಗಾಗಿ ಅಲ್ಲಿಯವರೆಗೆ ತಂಡದ ಮುಖ್ಯ ಕೋಚ್ ಜವಾಬ್ಧಾರಿಯನ್ನು ವಿವಿಎಸ್ ಲಕ್ಷ್ಮಣ್ ವಹಿಸಿಕೊಳ್ಳಲಿದ್ದಾರೆ.
ಜಿಂಬಾಬ್ವೆ ಸರಣಿಯಲ್ಲಿ ವಿವಿಎಸ್ ಲಕ್ಷ್ಮಣ್ ತಂಡದ ಕೋಚ್ ಆಗಿದ್ದರು. ಈಗ ದ್ರಾವಿಡ್ ಇಲ್ಲದ ಕಾರಣ ಜಿಂಬಾಬ್ವೆ ಪ್ರವಾಸದಿಂದ ನೇರವಾಗಿ ದುಬೈಗೆ ಬಂದಿಳಿಯಲಿರುವ ಲಕ್ಷ್ಮಣ್ ಮಧ್ಯಂತರ ಕೋಚ್ ಆಗಿ ಕಾರ್ಯನಿರ್ವಹಿಸಲಿದ್ದಾರೆ.