ಮೊದಲ ಪಂದ್ಯ ಸೋತ ಮೇಲೂ ಇಂಗ್ಲೆಂಡ್ ಮೊದಲು ಬ್ಯಾಟಿಂಗ್ ಆಯ್ದುಕೊಳ್ಳಲು ಕಾರಣ ಬಯಲು!

Webdunia
ಭಾನುವಾರ, 15 ಜುಲೈ 2018 (09:25 IST)
ಲಾರ್ಡ್ಸ್: ಮೊದಲ ಏಕದಿನ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿ ಸೋತ ಮೇಲೆ ಯಾವ ತಂಡವೂ ಸಾಮಾನ್ಯವಾಗಿ ನಂತರದ ಪಂದ್ಯದಲ್ಲಿ ಅದೇ ತಪ್ಪನ್ನು ಮಾಡುವುದಿಲ್ಲ. ಆದರೆ ಇಂಗ್ಲೆಂಡ್ ಅದನ್ನೇ ಮಾಡಿದೆ.

ದ್ವಿತೀಯ ಏಕದಿನ ಪಂದ್ಯದಲ್ಲಿ ತಾವು ಟಾಸ್ ಗೆದ್ದರೂ ಇಯಾನ್ ಮಾರ್ಗನ್ ಮತ್ತೆ ಮೊದಲು ಬ್ಯಾಟಿಂಗ್ ಮಾಡುವುದಾಗಿ ಹೇಳಿಕೊಂಡರು. ಇದು ಹಲವರನ್ನು ಅಚ್ಚರಿಗೆ ದೂಡಿತು. ಅದರಲ್ಲೂ ಟೀಂ ಇಂಡಿಯಾ ಚೇಸ್ ಮಾಡುವುದರಲ್ಲಿ ಯಾವತ್ತೂ ಮುಂದು ಎನ್ನುವ ಕಾರಣಕ್ಕೆ ಯಾವ ತಂಡವೂ ಈ ದುಸ್ಸಾಹಸ ಮಾಡಲ್ಲ.

ಆದರೆ ಇಂಗ್ಲೆಂಡ್ ನಾಯಕನ ಈ ನಿರ್ಧಾರದ ಹಿಂದೆ ಇದ್ದಿದ್ದು, ಕುಲದೀಪ್ ಯಾದವ್ ಭಯ! ದ್ವಿತೀಯ ಸರದಿಯಲ್ಲಿ ಬ್ಯಾಟಿಂಗ್ ಮಾಡಿದರೆ ಪಿಚ್ ಸ್ಪಿನ್ನರ್ ಗಳಿಗೆ ಅನುಕೂಲಕರವಾಗಿರುತ್ತದೆ. ಕುಲದೀಪ್ ಯಾದವ್ ಎದುರಿಸುವುದು ಕಷ್ಟವಾಗುತ್ತದೆ. ಇದೇ ಕಾರಣಕ್ಕೆ ಇಂಗ್ಲೆಂಡ್ ಮೊದಲು ಬ್ಯಾಟಿಂಗ್ ನ್ನೇ ಆರಿಸಿಕೊಂಡಿತು. ಸ್ವತಃ ಇಂಗ್ಲೆಂಡ್ ನಾಯಕ ಮಾರ್ಗನ್ ಇದರ ಸುಳಿವು ನೀಡಿದ್ದಾರೆ. ಕುಲದೀಪ್ ಯಾದವ್ ರನ್ನು ಹೆಚ್ಚು ಹೊತ್ತು ಎದುರಿಸಿದಷ್ಟು ನಮಗೆ ಅವರು ಯಾವ ರೀತಿ ಬೌಲಿಂಗ್ ಮಾಡುತ್ತಾರೆ ಎಂದು ಗೊತ್ತಾಗುತ್ತದೆ ಎಂದು ತಾವು ಮೊದಲು ಬ್ಯಾಟಿಂಗ್ ಆಯ್ದುಕೊಂಡಿರುವುದರ ಹಿಂದಿನ ಕಾರಣ ವಿವರಿಸಿದ್ದಾರೆ.

ಟೀಂ ಇಂಡಿಯಾದ ದುರದೃಷ್ಟಕ್ಕೆ ಮಾರ್ಗನ್ ಈ ಲೆಕ್ಕಾಚಾರ ಸರಿಯಾಗಿಯೇ ಕೆಲಸ ಮಾಡಿತು. ಭಾರತ ದ್ವಿತೀಯ ಪಂದ್ಯವನ್ನು 86 ರನ್ ಗಳಿಂದ ಸೋತಿತು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.             

ಸಂಬಂಧಿಸಿದ ಸುದ್ದಿ

Next Article