‘ಅಪ್ಪ’ ಧೋನಿ ಒಳ್ಳೆಯವರಾ? ಕೆಟ್ಟವರಾ? ಪುತ್ರಿ ಜೀವಾ ಸ್ಮಾರ್ಟ್ ಉತ್ತರ ಏನಿದೆ ನೋಡಿ!
ಧೋನಿ ತಮ್ಮ ಇನ್ ಸ್ಟಾಗ್ರಾಂ ಪುಟದಲ್ಲಿ ವಿಡಿಯೋವೊಂದನ್ನು ಪ್ರಕಟಿಸಿದ್ದು, ಅದರಲ್ಲಿ ಅಪ್ಪ-ಮಗಳು ಜತೆಯಾಗಿ ಬಾಲ್ ಆಡುತ್ತಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ.
ಈ ವಿಡಿಯೋದಲ್ಲಿ ಧೋನಿ ಪತ್ನಿ ಸಾಕ್ಷಿ ಜೀವಾ ಬಳಿ ‘ನಿನ್ನ ಪ್ರಕಾರ ಅಪ್ಪ ಒಳ್ಳೆಯವರಾ? ಕೆಟ್ಟವರಾ?’ ಎಂದು ಪ್ರಶ್ನೆ ಮಾಡುತ್ತಾರೆ. ಇದಕ್ಕೆ ಮುದ್ದು ಜೀವಾ ತನ್ನ ಮುದ್ದಾದ ಧನಿಯಲ್ಲಿ ‘ನೀವು ಎಲ್ಲರೂ ಒಳ್ಳೆಯವರೇ’ ಎಂದು ಸ್ಮಾರ್ಟ್ ಉತ್ತರ ಕೊಡುತ್ತಾಳೆ. ಎಷ್ಟೇ ಆದರೂ ಸ್ಮಾರ್ಟ್ ಕ್ಯಾಪ್ಟನ್ ಕೂಲ್ ಮಗಳಲ್ವಾ? ಹಾಗೇ ಇರ್ತಾಳೆ ಬಿಡಿ!