ಟೀಂ ಇಂಡಿಯಾದ ದೊಡ್ಡ ಚಿಂತೆ ಮರೆಸಿದ ಕೆಎಲ್ ರಾಹುಲ್
ಟೀಂ ಇಂಡಿಯಾ ಫೀಲ್ಡಿಂಗ್ ಮಾಡುವಾಗ ಸ್ಲಿಪ್ ನಲ್ಲಿ ನಿಂತಿದ್ದ ಕೆಎಲ್ ಈ ಪಂದ್ಯದಲ್ಲಿ ತಂಡಕ್ಕಿದ್ದ ದೊಡ್ಡ ಚಿಂತೆ ಮರೆಸಿದ್ದಾರೆ. ಕಳೆದ ಪಂದ್ಯದಲ್ಲಿ ಹಲವು ಕ್ಯಾಚ್ ಗಳು ಕೈ ಚೆಲ್ಲಿದ್ದವು. ಆದರೆ ಈ ಪಂದ್ಯದಲ್ಲಿ ಸ್ಲಿಪ್ ಫೀಲ್ಡರ್ ಆಗಿ ರಾಹುಲ್ ಯಶಸ್ವಿಯಾಗಿ ತಮ್ಮ ಕೆಲಸ ಪೂರೈಸಿದ್ದಾರೆ.
ಇಂಗ್ಲೆಂಡ್ ನ ಎರಡೂ ಇನಿಂಗ್ಸ್ ಸೇರಿ ಸ್ಲಿಪ್ ನಲ್ಲಿ ರಾಹುಲ್ ಒಟ್ಟು 7 ಕ್ಯಾಚ್ ಪಡೆದಿದ್ದಾರೆ. ಒಂದನ್ನೂ ಕೈ ಚೆಲ್ಲಿಲ್ಲ. ಸ್ಲಿಪ್ ಫೀಲ್ಡಿಂಗ್ ಎಂದರೆ ಭಾರತ ಕ್ರಿಕೆಟ್ ಗೆ ನೆನಪಾಗುವುದು ರಾಹುಲ್ ದ್ರಾವಿಡ್ ರನ್ನು. ಟೆಸ್ಟ್ ಕ್ರಿಕೆಟ್ ನಲ್ಲಿ ದ್ರಾವಿಡ್ ಗೆ ಇದು ಖಾಯಂ ಫೀಲ್ಡಿಂಗ್ ಸ್ಥಾನ. ಇಲ್ಲಿ ದ್ರಾವಿಡ್ ಪಡೆದ ಕ್ಯಾಚ್ ಗಳ ಸಂಖ್ಯೆಯೇ ದಾಖಲೆಯಾಗಿತ್ತು. ಇದೀಗ ಅದೇ ಸ್ಥಾನದಲ್ಲಿ ಅದೇ ಹೆಸರಿನ ವ್ಯಕ್ತಿ ಯಶಸ್ವಿಯಾಗಿ ತಮ್ಮ ಕೆಲಸ ಪೂರೈಸಿದ್ದು ವಿಶೇಷವಾಗಿದೆ.