ಟೀಂ ಇಂಡಿಯಾ ಏನಾದ್ರೂ ಪಾಕಿಸ್ತಾನದಲ್ಲಿ ಆಡುತ್ತಿದ್ದರೆ... ವಾಸಿಂ ಅಕ್ರಂ ಹೇಳಿಕೆ ವೈರಲ್

Krishnaveni K

ಮಂಗಳವಾರ, 11 ಮಾರ್ಚ್ 2025 (10:16 IST)
Photo Credit: X
ಕರಾಚಿ: ಚಾಂಪಿಯನ್ಸ್ ಟ್ರೋಫಿಯಲ್ಲಿ ಟೀಂ ಇಂಡಿಯಾ ಗೆಲುವಿನ ಬಳಿಕ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ವಾಸಿಂ ಅಕ್ರಂ ಹೇಳಿಕೆಯೊಂದು ಈಗ ವೈರಲ್ ಆಗಿದೆ.

ಟೀಂ ಇಂಡಿಯಾ ಫೈನಲ್ ಗೆದ್ದ ಬಳಿಕ ಕೆಲವರು ಹೊಟ್ಟೆ ಉರಿ ಪಟ್ಟುಕೊಂಡು ಏನೇನೋ ಹೇಳಿಕೆ ನೀಡಿದ್ದಾರೆ. ಭಾರತ ಒಂದೇ ಸ್ಥಳದಲ್ಲಿ ಆಡಿದ್ದಕ್ಕೆ ಗೆಲುವು ಸುಲಭವಾಯಿತು ಎಂದು ಆಸ್ಟ್ರೇಲಿಯಾ, ಇಂಗ್ಲೆಂಡ್ ನಾಯಕರೇ ಹೇಳಿಕೆ ನೀಡಿದ್ದರು. ಇನ್ನು, ಪಾಕಿಸ್ತಾನದ ಕೆಲವು ಮಾಜಿ ಕ್ರಿಕೆಟಿಗರಂತೂ ಪಾಕಿಸ್ತಾನದಲ್ಲಿ ಆಡಿದ್ದರೆ ಟೀಂ ಇಂಡಿಯಾ ಗೆಲ್ಲುತ್ತಲೇ ಇರಲಿಲ್ಲ ಎಂದಿದ್ದರು.

ಆದರೆ ಇವರೆಲ್ಲರ ನಡುವೆ ವಾಸಿಂ ಅಕ್ರಂ ವಿಭಿನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಟೀಂ ಇಂಡಿಯಾ ಈಗ ಇರುವ ಫಾರ್ಮ್ ಗೆ ಪ್ರಪಂಚದ ಯಾವುದೇ ಮೂಲೆಯಲ್ಲಿ ಆಡಿದ್ದರೂ ವೈಟ್ ಬಾಲ್ ಕ್ರಿಕೆಟ್ ನಲ್ಲಿ ಅವರನ್ನು ಸೋಲಿಸಲು ಬೇರೆ ಯಾರಿಂದಲೂ ಸಾಧ್ಯವಿಲ್ಲ ಎಂದಿದ್ದಾರೆ.

‘ಹಲವು ಒಂದೇ ತಾಣದಲ್ಲಿ ಆಡಿದ್ದಕ್ಕೆ ಟೀಂ ಇಂಡಿಯಾ ಗೆಲುವು ಕಂಡಿತು ಎಂದು ಹಲವರು ಹೇಳುತ್ತಿದ್ದಾರೆ. ಆದರೆ ನನ್ನ ಪ್ರಕಾರ ಪಾಕಿಸ್ತಾನದಲ್ಲೇ ಆಡಿದ್ದರೂ ಟೀಂ ಇಂಡಿಯಾ ಗೆಲ್ಲುತ್ತಿತ್ತು. ಈ ಹಿಂದೆ ಇದೇ ಟೀಂ ಇಂಡಿಯಾ ಅಮೆರಿಕಾದಲ್ಲಿ ಒಂದೇ ಒಂದು ಪಂದ್ಯ ಸೋಲದೇ ಟಿ20 ವಿಶ್ವಕಪ್ ಗೆದ್ದಿತ್ತು. ಟೀಂ ಇಂಡಿಯಾ ಅಷ್ಟು ಪ್ರಬಲ ತಂಡವಾಗಿದೆ’ ಎಂದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ