ಏಕದಿನ ವಿಶ್ವಕಪ್: ಆರು ಪಂದ್ಯಗಳಿಂದ ಟೀಂ ಇಂಡಿಯಾ ಬೌಲರ್ ಗಳು ಗಳಿಸಿದ ವಿಕೆಟ್ ಗಳು ಎಷ್ಟು?

ಬುಧವಾರ, 1 ನವೆಂಬರ್ 2023 (07:27 IST)
ಲಕ್ನೋ: ಐಸಿಸಿ ಏಕದಿನ ವಿಶ್ವಕಪ್ 2023 ರಲ್ಲಿ ಟೀಂ ಇಂಡಿಯಾ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಪ್ರಚಂಡ ಪ್ರದರ್ಶನ ನೀಡುತ್ತಿದೆ.

ಅದರಲ್ಲೂ ಕನಿಷ್ಠ ಮೊತ್ತವನ್ನೂ ಚಾಣಕ್ಷ್ಯತನದಿಂದ ರಕ್ಷಿಸಿಕೊಳ್ಳುತ್ತಿರುವ ಟೀಂ ಇಂಡಿಯಾ ಬೌಲರ್ ಗಳ ಬೌಲಿಂಗ್ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಸಿರಾಜ್, ಬುಮ್ರಾ, ಶಮಿ ಎಂಬ ಮೂವರು ತ್ರಿವಳಿಗಳ ಜೊತೆಗೆ ಕುಲದೀಪ್-ಜಡೇಜಾ ಸ್ಪಿನ್ ಅಸ್ತ್ರ ಭಾರತದ ಬಲ ಹೆಚ್ಚಿಸಿದೆ.

ಈ ಕೂಟದಲ್ಲಿ ಟೀಂ ಇಂಡಿಯಾ ಯಾವ ಬೌಲರ್ ಗಳು ಎಷ್ಟು ವಿಕೆಟ್ ಪಡೆದಿದ್ದಾರೆ ನೋಡೋಣ. ಇದುವರೆಗೆ ನಡೆದ ಆರೂ ಪಂದ್ಯಗಳನ್ನು ಆಡಿರುವ ಜಸ್ಪ್ರೀತ್ ಬುಮ್ರಾ 14 ವಿಕೆಟ್ ಗಳೊಂದಿಗೆ ಮೊದಲ ಸ್ಥಾನದಲ್ಲಿದ್ದಾರೆ. ಕುಲದೀಪ್ ಕೂಡಾ 6 ಪಂದ್ಯಗಳಿಂದ 10 ವಿಕೆಟ್ ಪಡೆದಿದ್ದಾರೆ. ಆದರೆ ಕೇವಲ ಎರಡೇ ಪಂದ್ಯವಾಡಿರುವ ಮೊಹಮ್ಮದ್ ಶಮಿ ಈಗಾಗಲೇ 9 ವಿಕೆಟ್ ಕಬಳಿಸಿದ್ದಾರೆ. ಇನ್ನು ಆಲ್ ರೌಂಡರ್ ಜಡೇಜಾ 8, ಮೊಹಮ್ಮದ್ ಸಿರಾಜ್ 6 ವಿಕೆಟ್ ತಮ್ಮದಾಗಿಸಿಕೊಂಡಿದ್ದಾರೆ. ಇದು ಈ ಕೂಟದಲ್ಲಿ ಭಾರತದ ಬೌಲರ್ ಗಳ ಪಾರಮ್ಯಕ್ಕೆ ಸಾಕ್ಷಿಯಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ