ವಿಶ್ವಕಪ್ ಗೆದ್ದ ಟ್ರೋಫಿ ಪಡೆದು ಕೋಚ್ ದ್ರಾವಿಡ್ ಬಳಿಗೆ ಓಡೋಡಿ ಬಂದ ಕ್ರಿಕೆಟಿಗರು

ಶನಿವಾರ, 3 ಫೆಬ್ರವರಿ 2018 (14:17 IST)
ಬೇ ಓವಲ್: ಅಂಡರ್ 19 ವಿಶ್ವಕಪ್ ಗೆದ್ದ ಸಾಧನೆ ಭಾರತೀಯ ಕ್ರಿಕೆಟಿಗರು ಈ ಗೆಲುವಿನ ಕ್ರೆಡಿಟ್ ನ್ನು ಸಂಪೂರ್ಣವಾಗಿ ರಾಹುಲ್ ದ್ರಾವಿಡ್ ಗೆ ಅರ್ಪಿಸಿದ್ದಾರೆ. ಕಳೆದೆರಡು ವರ್ಷಗಳಿಂದ ದ್ರಾವಿಡ್ ಈ ತಂಡವನ್ನು ಕಟ್ಟಿ ಬೆಳೆಸಿದ್ದರು.
 

ಇದೀಗ ಭಾರತೀಯ ನಾಯಕ ಪೃಥ್ವಿ ಶಾ ಕೈಗೆ ಟ್ರೋಫಿ ನೀಡುತ್ತಿದ್ದಂತೆ ಕುಣಿದು ಕುಪ್ಪಳಿಸಿದ ಕ್ರಿಕೆಟಿಗರು ನೇರವಾಗಿ ಶಾಂತಮೂರ್ತಿಯಂತೆ ನಿಂತಿದ್ದ ದ್ರಾವಿಡ್ ಬಳಿಗೆ ಓಡಿ ಬಂದು ಟ್ರೋಫಿ ಒಪ್ಪಿಸಿದ ದೃಶ್ಯ ರೋಮಾಂಚನಗೊಳಿಸುವಂತಿತ್ತು.

ಕ್ರಿಕೆಟಿಗರ ಸಾಧನೆಯನ್ನು ಮೆಚ್ಚಿದ ಬಿಸಿಸಿಐ ವಿಜೇತ ತಂಡದ ಕ್ರಿಕೆಟಿಗರಿಗೆ 30 ಲಕ್ಷ ರೂ. ಮತ್ತು ಕೋಚ್ ರಾಹುಲ್  ದ್ರಾವಿಡ್ ಗೆ 50 ಲಕ್ಷ ರೂ. ಬಹುಮಾನ ಘೋಷಿಸಿದೆ. ರಾಹುಲ್ ಮತ್ತು ಬಳಗಕ್ಕೆ ರಾಷ್ಟ್ರಪತಿಯಿಂದ ಹಿಡಿದು ಕ್ರಿಕೆಟ್ ಲೋಕವೇ ಅಭಿನಂದಿಸುತ್ತಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ