ಪದಾರ್ಪಣೆ ಪಂದ್ಯದಲ್ಲೇ ದಾಖಲೆ ಮಾಡಿದ ಮಯಾಂಕ್ ಯಾದವ್ ಹಿನ್ನಲೆ ಇಲ್ಲಿದೆ

Krishnaveni K

ಸೋಮವಾರ, 7 ಅಕ್ಟೋಬರ್ 2024 (10:59 IST)
Photo Credit: X
ಗ್ವಾಲಿಯರ್: ಭಾರತ ಮತ್ತು ಬಾಂಗ್ಲಾದೇಶ ನಡುವಿನ ಮೊದಲ ಟಿ20 ಪಂದ್ಯದಲ್ಲಿ ಪದಾರ್ಪಣೆ ಮಾಡಿದ ಪಂದ್ಯದಲ್ಲೇ ಮೊದಲ ಓವರ್ ಮೇಡನ್ ಮಾಡಿ ದಾಖಲೆ ಮಾಡಿದ ಮಯಾಂಕ್ ಯಾದವ್ ಹಿನ್ನಲೆ ಇಲ್ಲಿದೆ ನೋಡಿ.

22 ವರ್ಷದ ಮಯಾಂಕ್ ಯಾದವ್ ಮೂಲತಃ ದೆಹಲಿಯವರು. ದೆಹಲಿ ಪರ ದೇಶೀಯ ಕ್ರಿಕೆಟ್ ಆಡುತ್ತಾ ಐಪಿಎಲ್ ನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಪರ ಆಡಿ ಗಮನ ಸೆಳೆದವರು. ಹಾಲಿ ಕೋಚ್ ಗೌತಮ್ ಗಂಭೀರ್ ಗರಡಿಯಲ್ಲಿ ಲಕ್ನೋ ತಂಡದಲ್ಲಿ ಪಳಗಿದವರು. ಇದೀಗ ತಮ್ಮ ಕೋಚ್ ವಿಶ್ವಾಸವನ್ನು ಅವರು ಉಳಿಸಿಕೊಂಡರು.

ಮೊದಲ ಪಂದ್ಯದಲ್ಲಿಯೇ ಮೇಡನ್ ಓವರ್ ದಾಖಲೆ ಜೊತೆಗೆ 147 ಕೆಪಿಎಚ್ ಬೌಲಿಂಗ್ ಮಾಡುವ ಮೂಲಕ ತಾನೊಬ್ಬ ಭವಿಷ್ಯದ ತಾರೆ ಎಂದು ನಿರೂಪಿಸಿದರು. ಐಪಿಎಲ್ ನಲ್ಲಿ ಅವರು ಮೊದಲು ಆರ್ ಸಿಬಿ ಪ್ರತಿನಿಧಿಸುತ್ತಿದ್ದರು. ಆದರೆ ಅಲ್ಲಿ ಅವರಿಗೆ ಹೆಚ್ಚು ಅವಕಾಶ ಸಿಗಲಿಲ್ಲ. ಬಳಿಕ ಲಕ್ನೋ ತಂಡ ಸೇರಿಕೊಂಡ ಮೇಲೆ ಬೌಲಿಂಗ್ ಅವಕಾಶ ಸಿಕ್ಕಿತ್ತು.

ಐಪಿಎಲ್ ನಲ್ಲಿ ಅವರ ಪ್ರದರ್ಶನ ನೋಡಿಯೇ ಗಂಭೀರ್ ಈಗ ರಾಷ್ಟ್ರೀಯ ತಂಡದಲ್ಲಿ ಆಡುವ ಅವಕಾಶ ಕೊಟ್ಟಿದ್ದಾರೆ. ತೀರಾ ಕಷ್ಟದಿಂದ ಮೇಲೆ ಬಂದ ಮಯಾಂಕ್ ಯಾದವ್ ಈಗ ಕ್ರಿಕೆಟ್ ನಲ್ಲಿ ತಮ್ಮದೇ ಛಾಪು ಮೂಡಿಸಲು ಹೊರಟಿದ್ದಾರೆ. ಅವರ ಬೌಲಿಂಗ್ ಇಂಪ್ರೆಸಿವ್ ಆಗಿದ್ದು ಮುಂಬರುವ ದಿನಗಳಲ್ಲಿ ಕಿರು ಮಾದರಿಗಳಲ್ಲಿ ಖಾಯಂ ಸ್ಥಾನ ಪಡೆಯುವ ಭರವಸೆ ಮೂಡಿಸಿದ್ದಾರೆ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ