ಕೆಎಲ್ ರಾಹುಲ್ ಆಡುವ ಫೈನಲ್ ಪಂದ್ಯಗಳಲ್ಲಿ ಪತ್ನಿ ಅಥಿಯಾ ಶೆಟ್ಟಿ ಇರೋದಿಲ್ಲ ಯಾಕೆ ಇಲ್ಲಿದೆ ಕಾರಣ
ಕೆಎಲ್ ರಾಹುಲ್ ಪತ್ನಿ ಅಥಿಯಾ ತನ್ನ ಗಂಡ ಆಡುವ ಪಂದ್ಯಗಳನ್ನು ಹೆಚ್ಚಾಗಿ ಟಿವಿಯಲ್ಲೇ ನೋಡಿ ಖುಷಿಪಡುತ್ತಾರೆ. ಅವರು ಮೈದಾನಕ್ಕೆ ಬರುವುದೇ ಅಪರೂಪ. ಈ ಬಾರಿ ಫೈನಲ್ ಪಂದ್ಯವನ್ನೂ ಅವರು ಟಿವಿಯಲ್ಲೇ ನೋಡಿ ಖುಷಿಪಟ್ಟಿದ್ದಾರೆ.
ಅಥಿಯಾ ಈಗ ಗರ್ಭಿಣಿಯಾಗಿದ್ದು ಮನೆಯಲ್ಲಿಯೇ ವಿಶ್ರಾಂತಿಯಲ್ಲಿದ್ದಾರೆ. ಇದಕ್ಕೆ ಮೊದಲೂ ಅವರು ಮೈದಾನಕ್ಕೆ ಬಂದು ಪಂದ್ಯ ನೋಡಿದ್ದು ಅಪರೂಪ. ಇದಕ್ಕೆ ಕಾರಣವನ್ನೂ ಅವರು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು.
ಮೈದಾನಕ್ಕೆ ಬಂದು ಪಂದ್ಯ ನೋಡುವಾಗಲೆಲ್ಲಾ ಟೀಂ ಇಂಡಿಯಾ ಸೋಲುತ್ತದೆ ಎಂಬ ನಂಬಿಕೆ ಅವರದ್ದು. ಇದೇ ಕಾರಣಕ್ಕೆ ಮನೆಯಲ್ಲಿ ಒಂದೇ ಸ್ಥಳದಲ್ಲಿ ಕದಲದೇ ಕೂತು ಪಂದ್ಯ ವೀಕ್ಷಿಸುತ್ತಾರಂತೆ. ಕ್ರಿಕೆಟ್ ಪಂದ್ಯದ ವಿಚಾರದಲ್ಲಿ ಅಭಿಮಾನಿಗಳು ಎಷ್ಟೋ ಮೂಢನಂಬಿಕೆಗಳನ್ನಿಟ್ಟುಕೊಂಡಿರುತ್ತಾರೆ. ಇದಕ್ಕೆ ಅಥಿಯಾ ಕೂಡಾ ಹೊರತಾಗಿಲ್ಲ.