Champions Trophy: ರಾಹುಲ್ ಎಲ್ಲಿದ್ದೀಯಪ್ಪಾ ಎಂದು ಹುಡುಕಾಡಿದ ಕೊಹ್ಲಿ, ರೋಹಿತ್ (ವಿಡಿಯೋ)
ಈ ಫೈನಲ್ ಗೆಲುವಿಗೆ ಕೆಎಲ್ ರಾಹುಲ್ ಪ್ರಮುಖ ಕಾರಣ. ಫೈನಲ್ ಗೆಲುವಿನ ಬಳಿಕ ಎಲ್ಲಾ ಆಟಗಾರರೂ ಮೈದಾನದಲ್ಲಿದ್ದರು. ಎಲ್ಲರೂ ಪರಸ್ಪರ ತಬ್ಬಿಕೊಂಡು ಸಂಭ್ರಮಿಸುವುದರಲ್ಲಿ ಮುಳುಗಿ ಹೋಗಿದ್ದರು.
ಈ ವೇಳೆ ಕೆಎಲ್ ರಾಹುಲ್ ಸಹ ಆಟಗಾರರು, ಕ್ಯಾಮರಾ ಮ್ಯಾನ್ ಗಳ ನಡುವೆ ಕಳೆದೇ ಹೋಗಿದ್ದರು. ಹೀಗಾಗಿ ರೋಹಿತ್ ಮತ್ತು ಕೊಹ್ಲಿ ಗೆಲುವಿನ ರೂವಾರಿ ರಾಹುಲ್ ಗಾಗಿ ಹುಡುಕಾಡಿದ್ದರು. ಕೊನೆಗೂ ಕ್ಯಾಮರಾ ಮ್ಯಾನ್ ಗಳ ಮಧ್ಯೆ ರಾಹುಲ್ ಸಿಕ್ಕಾಗ ಕೊಹ್ಲಿ ಮುಖದಲ್ಲಿ ಕಳೆದುಕೊಂಡವರ ಸಿಕ್ಕ ಭಾವವಿತ್ತು.
ಬಳಿಕ ಇಬ್ಬರೂ ರಾಹುಲ್ ರನ್ನು ಅಪ್ಪಿ ಸಂಭ್ರಮಿಸಿದರು. ಬಳಿಕ ಎಲ್ಲರೂ ರಾಹುಲ್ ರನ್ನು ಅಪ್ಪಿ ಕುಣಿದಾಡಿದ್ದಾರೆ. ಈ ಚಾಂಪಿಯನ್ಸ್ ಟ್ರೋಫಿಯಲ್ಲಿ ಕಳೆದ ಎರಡು ಪಂದ್ಯಗಳಲ್ಲೂ ರಾಹುಲ್ ತಾಳ್ಮೆಯ ಆಟದ ಮೂಲಕ ಪಂದ್ಯ ಗೆಲ್ಲಿಸಿಕೊಟ್ಟಿದ್ದಾರೆ.