ಭಾರತದ ವಿರುದ್ಧ ಸೋತರೂ ಇಂಗ್ಲೆಂಡ್ ಕ್ರಿಕೆಟಿಗರು ಸಂಭ್ರಮಿಸಿದ್ದು ಏಕೆ?

ಶುಕ್ರವಾರ, 6 ಜುಲೈ 2018 (09:07 IST)
ಮ್ಯಾಂಚೆಸ್ಟರ್: ಮೊದಲ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ವಿರುದ್ಧ 8 ವಿಕೆಟ್ ಗಳಿಂದ ಹೀನಾಯವಾಗಿ ಸೋತರೂ ಇಂಗ್ಲೆಂಡ್ ಕ್ರಿಕೆಟಿಗರು ಸಂಭ್ರಮಾಚರಣೆ ಮಾಡಿದ್ದಾರೆ!

ಆದರೆ ಇಂಗ್ಲೆಂಡ್ ಕ್ರಿಕೆಟಿಗರು ಸಂಭ್ರಮಿಸಿದ್ದು ತಾವು ಸೋತಿದ್ದಕ್ಕಲ್ಲ. ತಮ್ಮ ದೇಶದ ಫುಟ್ ಬಾಲ್ ತಂಡ ಫಿಫಾ ವಿಶ್ವಕಪ್ ಪಂದ್ಯಾವಳಿಯಲ್ಲಿ ಕೊಲಂಬಿಯಾ ವಿರುದ್ಧ 4-3 ಅಂತರದಿಂದ ಕೊನೆಯ ಹಂತದಲ್ಲಿ ಗೆಲುವು ಕಂಡಿತ್ತು.

ಇದೇ ಕಾರಣಕ್ಕೆ ಇಂಗ್ಲೆಂಡ್ ಕ್ರಿಕೆಟ್ ಆಟಗಾರರು ಡ್ರೆಸ್ಸಿಂಗ್ ರೂಂನಲ್ಲಿ ಟಿವಿ ನೋಡುತ್ತಾ ಕುಣಿದು ಕುಪ್ಪಳಿಸಿದ್ದಾರೆ. ಇಂಗ್ಲೆಂಡ್ ಫುಟ್ ಬಾಲ್ ತಂಡ ಈ ಗೆಲುವಿನೊಂದಿಗೆ ಕ್ವಾರ್ಟರ್ ಫೈನಲ್ ಹಂತಕ್ಕೇರಿತು. ಇದೇ ಖುಷಿಗೆ ತಮ್ಮ ಸೋಲಿನ ಕಹಿಯನ್ನೂ ಮರೆತು ಇಂಗ್ಲೆಂಡ್ ಕ್ರಿಕೆಟಿಗರು ಸಂಭ್ರಮಾಚರಣೆ ಮಾಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.       

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ