ಒತ್ತಡ ನಿಭಾಯಿಸಲು ಭಾರತೀಯ ಮಹಿಳಾ ಕ್ರಿಕೆಟಿಗರು ಸೋಲುತ್ತಿರುವುದೇಕೆ?
ಮಂಗಳವಾರ, 9 ಆಗಸ್ಟ್ 2022 (08:30 IST)
ಮುಂಬೈ: 2017 ರಲ್ಲಿ ಏಕದಿನ ವಿಶ್ವಕಪ್ ಫೈನಲ್ ಗೇರಿದ್ದ ಭಾರತ ಮಹಿಳಾ ಕ್ರಿಕೆಟ್ ತಂಡ ಫೈನಲ್ ನಲ್ಲಿ ಎಡವಿ ಬಿತ್ತು. ಮೊನ್ನೆ ಕಾಮನ್ ವೆಲ್ತ್ ಗೇಮ್ಸ್ ಫೈನಲ್ ಪಂದ್ಯದಲ್ಲೂ ಆಸ್ಟ್ರೇಲಿಯಾ ವಿರುದ್ಧ ಕೊನೆಯ ಕ್ಷಣದಲ್ಲಿ ಸೋತು ಹೋಯಿತು. ಇದಕ್ಕೆಲ್ಲಾ ಒಂದೇ ಕಾರಣ, ಒತ್ತಡ ನಿಭಾಯಿಸಲು ವಿಫಲವಾಗುತ್ತಿರುವುದು.
ಭಾರತೀಯ ಮಹಿಳಾ ಕ್ರಿಕೆಟಿಗರಿಗೆ ಪುರುಷರ ಕ್ರಿಕೆಟ್ ನಷ್ಟು ಪ್ರೆಷರ್ ಗೇಮ್ ಆಡಿ ಅನುಭವವಿಲ್ಲ. ಪಂದ್ಯದಲ್ಲಿ ಕೊನೆಯ ಕ್ಷಣದಲ್ಲಿ ಶಾಂತ ಚಿತ್ತರಾಗಿ ಒತ್ತಡ ನಿಭಾಯಿಸಬೇಕೆಂದರೆ ಅನುಭವ ಬೇಕು. ಇಂತಹ ಪಂದ್ಯಗಳನ್ನು ಪದೇ ಪದೇ ಆಡಿದ ಅನುಭವ ಬೇಕು. ಆದರೆ ಮಹಿಳಾ ಕ್ರಿಕೆಟಿಗರಿಗೆ ಅದಕ್ಕೆ ತಕ್ಕ ಅನುಭವವಿಲ್ಲ. ಹೀಗಾಗಿ ಪದೇ ಪದೇ ಆಸ್ಟ್ರೇಲಿಯಾದಂತಹ ದೈತ್ಯ ತಂಡಗಳ ವಿರುದ್ಧ ಗೆಲುವಿನ ಸನಿಹಕ್ಕೆ ಬಂದು ಸೋಲು ಕಾಣುತ್ತಿದೆ.
ಇದೇ ಕಾರಣಕ್ಕೆ ನಾಯಕಿ ಹರ್ಮನ್ ಪ್ರೀತ್ ಕೌರ್ ಮಹಿಳೆಯರಿಗೂ ಐಪಿಎಲ್ ಕ್ರಿಕೆಟ್ ನ ಅಗತ್ಯವಿದೆ ಎಂದಿದ್ದಾರೆ. ಚುಟುಕು ಫಾರ್ಮ್ಯಾಟ್ ನ ರೋಚಕತೆ, ಒತ್ತಡದ ಪಂದ್ಯಗಳು ಇದೀಗ ಪುರುಷರ ಕ್ರಿಕೆಟ್ ಗೆ ಸಾಕಷ್ಟು ಪ್ರಯೋಜನವಾಗುತ್ತಿದೆ. ಇದೇ ರೀತಿಯ ಮಹಿಳೆಯರೂ ಇಂತಹ ಒತ್ತಡಗಳಿಗೆ ಮೈ ಒಡ್ಡಿದರೆ ಮುಂದೆ ಅವರಿಗೂ ಒತ್ತಡದ ಪಂದ್ಯಗಳನ್ನು ನಿಭಾಯಿಸುವ ಕಲೆ ಕರಗತವಾಗಬಹುದು.