ಥೋ... ರೋಹಿತ್ ಶರ್ಮಾ ಪತ್ನಿ ಎಂದು ತಪ್ಪಾಗಿ ತಿಳಿದು ಖಾಸಗಿ ಮೆಸೇಜ್ ಮಾಡಿದ ಆರ್ ಅಶ್ವಿನ್

Krishnaveni K

ಸೋಮವಾರ, 6 ಜನವರಿ 2025 (11:26 IST)
Photo Credit: X
ಮುಂಬೈ: ಟೀಂ ಇಂಡಿಯಾದಿಂದ ಇತ್ತೀಚೆಗಷ್ಟೇ ನಿವೃತ್ತಿಯಾದ ಕ್ರಿಕೆಟಿಗ ರವಿಚಂದ್ರನ್ ಅಶ್ವಿನ್ ನಾಯಕ ರೋಹಿತ್ ಶರ್ಮಾ ಪತ್ನಿ ಎಂದು ತಪ್ಪಾಗಿ ತಿಳಿದು ಸೋಷಿಯಲ್ ಮೀಡಿಯಾದಲ್ಲಿ ಎಡವಟ್ಟು ಮಾಡಿಕೊಂಡಿದ್ದಾರೆ.

ಆರ್ ಅಶ್ವಿನ್ ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿದ್ದಾರೆ. ಕ್ರಿಕೆಟ್ ಬಗ್ಗೆ ಆಗಾಗ ಕಾಮೆಂಟ್ ಮಾಡುತ್ತಲೇ ಇರುತ್ತಾರೆ. ಈ ನಡುವೆ ಅವರ ಟ್ವೀಟ್ ಪುಟದಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ಸರಣಿ ಸೋತ ಬಳಿಕ ರಿತಿಕಾ ಎನ್ನುವ ಹೆಸರಿರುವ ಒಬ್ಬರು ಖಾತೆದಾರರು ‘ಆಸ್ಟ್ರೇಲಿಯಾದವರು ಸರಣಿ ಕ್ಲೀನ್ ಸ್ವೀಪ್ ಮಾಡಿಕೊಳ್ಳಬಹುದು ಎಂದುಕೊಂಡಿದ್ದರು. ಅದು ಸಾಧ್ಯವಾಗಲಿಲ್ಲ’ ಎಂದು ನಗುವಿನ ಇಮೋಜಿ ಹಾಕಿ ಕಾಮೆಂಟ್ ಮಾಡಿದ್ದರು.

ಈ ಖಾತೆಯ ಹೆಸರು ಮಾತ್ರವಲ್ಲ ರಿತಿಕಾ ಫೋಟೋ ಕೂಡಾ ಇದ್ದಿದ್ದರಿಂದ ಅಶ್ವಿನ್ ಕನ್ ಫ್ಯೂಸ್ ಆದರು. ರೋಹಿತ್ ಪತ್ನಿ ರಿತಿಕಾರೇ ಕಾಮೆಂಟ್ ಮಾಡಿದ್ದಾರೆ ಎಂದು ತಪ್ಪಾಗಿ ತಿಳಿದು, ‘ಹಾಯ್ ರಿತಿಕಾ ಹೇಗಿದ್ದೀರಿ? ಮಗು ಹೇಗಿದೆ?’ ಎಂದು ಕಾಮೆಂಟ್ ಮಾಡಿದ್ದರು.

ಇದಕ್ಕೆ ನಕಲಿ ರಿತಿಕಾ ಖಾತೆದಾರರು ‘ನಾನು ಚೆನ್ನಾಗಿದ್ದೇನೆ’ ಎಂದು ಉತ್ತರ ಕೊಟ್ಟಿದ್ದರು. ಆಗಲೇ ಅಶ್ವಿನ್ ಗೆ ಅದು ನಿಜವಾದ ರಿತಿಕಾ ಅಲ್ಲ ಎಂದು ಗೊತ್ತಾಗಿದ್ದು. ತಕ್ಷಣವೇ ಅವರು ತಮ್ಮ ಸಂದೇಶವನ್ನು ಡಿಲೀಟ್ ಮಾಡಿದ್ದರು. ಆದರೆ ಅಷ್ಟರಲ್ಲಾಗಲೇ ಹಲವು ಅವರ ಟ್ವೀಟ್ ನೋಡಿ ಆಗಿತ್ತು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ