ಮಹಿಳಾ ವಿಶ್ವಕಪ್: ಪಾಕ್ ವಿರುದ್ಧ ಭಾರತ ಉತ್ತಮ ಮೊತ್ತ

ಭಾನುವಾರ, 6 ಮಾರ್ಚ್ 2022 (09:57 IST)
ನವದೆಹಲಿ: ನ್ಯೂಜಿಲೆಂಡ್ ನಲ್ಲಿ ನಡೆಯುತ್ತಿರುವ ಮಹಿಳೆಯರ ಏಕದಿನ ವಿಶ್ವಕಪ್ ನಲ್ಲಿ ಇಂದು ಭಾರತ ಮೊದಲ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಮೊದಲು ಬ್ಯಾಟಿಂಗ್ ಮಾಡಿ 50 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 244 ರನ್ ಗಳಿಸಿದೆ.

ಆರಂಭಿಕ ಆಟಗಾರ್ತಿ ಶಫಾಲಿ ವರ್ಮ ಶೂನ್ಯಕ್ಕೆ ನಿರ್ಗಮಿಸಿದರು. ಆದರೆ ಸ್ಮೃತಿ ಮಂಥನಾ 52, ದೀಪ್ತಿ ಶರ್ಮಾ 40 ರನ್ ಗಳಿಸಿ ತಂಡಕ್ಕೆ ಉತ್ತಮ ಅಡಿಪಾಯ ಹಾಕಿಕೊಟ್ಟರು.

ನಾಯಕಿ ಮಿಥಾಲಿ ರಾಜ್ ಕೇವಲ 9 ರನ್ ಗಳಿಸಿದರೆ, ಹರ್ಮನ್ ಪ್ರೀತ್ ಕೌರ್, ರಿಷಾ ಘೋಷ್ ಕೂಡಾ ವಿಫಲರಾದರು. ಬಳಿಕ ಕೆಳ ಕ್ರಮಾಂಕದಲ್ಲಿ ಸ್ನೇಹ ರಾಣಾ ಔಟಾಗದೇ 53, ಪೂಜಾ ವಸ್ತ್ರಾಕರ್ 67 ರನ್ ಗಳಿಸಿ ತಂಡದ ಮೊತ್ತ ಉಬ್ಬಲು ನೆರವಾದರು. ಅಂತಿಮವಾಗಿ ಭಾರತದ ವನಿತೆಯರು ಪಾಕ್ ಗೆಲುವಿಗೆ 245 ರನ್ ಗಳ ಗುರಿ ನಿಗದಿಪಡಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ