Womens World Cup: ಭಾರತದ ವನಿತೆಯರು ವಿಶ್ವಕಪ್‌ ಗೆದ್ದರೆ ₹ 162 ಕೋಟಿ ಬಹುಮಾನ

Sampriya

ಭಾನುವಾರ, 2 ನವೆಂಬರ್ 2025 (12:16 IST)
Photo Credit X
ಮುಂಬೈ: ಮಹಿಳಾ ಏಕದಿನ ವಿಶ್ವಕಪ್‌ ಫೈನಲ್‌ಗೆ ಇದೇ ದೇಶವೇ ಕಾತರದಿಂದ ಕಾಯುತ್ತಿದೆ. ಇಂದು ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಕ್ಕೆ ಪ್ರಶಸ್ತಿಗಾಗಿ ಸೆಣಸಾಟ ನಡೆಸುತ್ತಿವೆ. ಒಂದು ವೇಳೆ ಇಂದು ತವರಿನಲ್ಲಿ ಭಾರತದ ವನಿತೆಯರು ಚಾರಿತ್ರಿಕ ಸಾಧನೆ ಮಾಡಿದಲ್ಲಿ ಊಹೆಗೂ ನಿಲುಕದಷ್ಟು ಬಹುಮಾನ ಜೇಬಿಗಿಳಿಸಲಿದ್ದಾರೆ.

ಭಾರತ ತಂಡವು ಸೆಮಿಫೈನಲ್‌ನಲ್ಲಿ ಏಳು ಬಾರಿಯ ಚಾಂಪಿಯನ್‌ ಆಸ್ಟ್ರೇಲಿಯಾ ತಂಡವನ್ನ ಮಣಿಸಿ ಭಾರತ ಮಹಿಳಾ ಕ್ರಿಕೆಟ್‌ ತಂಡ 2025ನೇ ಸಾಲಿನ ವಿಶ್ವಕಪ್‌ ಫೈನಲ್‌ ತಲುಪಿದೆ. ದಕ್ಷಿಣ ಆಫ್ರಿಕಾ ತಂಡವು ಮಾಜಿ ಚಾಂಪಿಯನ್‌ ಇಂಗ್ಲೆಂಡ್‌ ತಂಡವನ್ನು ಸೋಲಿಸಿ ಪ್ರಶಸ್ತಿ ಸುತ್ತು ಪ್ರವೇಶಿಸಿದೆ. 

ಐಸಿಸಿಯಿಂದ ಚಾಂಪಿಯನ್‌ ತಂಡಕ್ಕೆ ₹ 37.3 ಕೋಟಿ ಹಾಗೂ ರನ್ನರ್‌ ಅಪ್‌ ತಂಡಕ್ಕೆ 20 ಕೋಟಿ ಬಹುಮಾನ ಸಿಗಲಿದೆ. ಭಾರತ ತವರಿನಲ್ಲಿ ಪ್ರಶಸ್ತಿ ಗೆದ್ದರೆ ಬಿಸಿಸಿಐನಿಂದ ದೊಡ್ಡ ಮೊತ್ತದ ಬಹುಮಾನ ಸಿಗಲಿದೆ. ಮೂಲಗಳ ಪ್ರಕಾರ ಬಿಸಿಸಿಐಯಿಂದ ₹125 ಕೋಟಿ ಬಹುಮಾನ ಸಿಗುವ ಸಾಧ್ಯತೆಯಿದೆ. ಹೀಗೆ ಒಟ್ಟು 162 ಕೋಟಿ ಬಹುಮಾನ ಸಿಗಲಿದೆ.

2005ರಲ್ಲಿ ಭಾರತ ಮೊದಲ ಬಾರಿ ಫೈನಲ್‌ ಪ್ರವೇಶಿಸಿದಾಗ ಆಸೀಸ್‌ ವಿರುದ್ಧವೇ 98 ರನ್‌ಗಳಿಂದ ಸೋತಿತ್ತು. 2017ರಲ್ಲಿ ಇಂಗ್ಲೆಂಡ್‌ ವಿರುದ್ಧ ಲಾರ್ಡ್ಸ್‌ನಲ್ಲಿ 9 ರನ್‌ಗಳ ವಿರೋಚಿತ ಸೋಲು ಕಂಡಿತ್ತು. ಸದ್ಯ 8 ವರ್ಷಗಳ ಬಳಿಕ ಭಾರತ 3ನೇ ಬಾರಿಗೆ ಫೈನಲ್‌ ತಲುಪಿದ್ದು, ಚೊಚ್ಚಲ ಟ್ರೋಫಿ ಮುಡಿಗೇರಿಸಿಕೊಳ್ಳುವ ಪ್ರಯತ್ನದಲ್ಲಿದೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ