TATA WPL: ಟಾಸ್ ವೇಳೆ ಸ್ಮೃತಿ ಮಂಧನ ಹೆಸರು ಹೇಳುತ್ತಿದ್ದಂತೆ ಆರ್ ಸಿಬಿ ಫ್ಯಾನ್ಸ್ ರಿಯಾಕ್ಷನ್ ವಿಡಿಯೋ ನೋಡಿ

Sampriya

ಶುಕ್ರವಾರ, 14 ಫೆಬ್ರವರಿ 2025 (19:28 IST)
Photo Courtesy X
ವಡೋದರಾ: ಭಾರತದ ವನಿತೆಯರ WPL 2025ರ ಕಾಯುವಿಕೆ  ಕೊನೆಗೂ ಕೊನೆಗೊಂಡಿದೆ. ಮಹಿಳಾ ಪ್ರೀಮಿಯರ್‌ ಲೀಗ್‌ 3ನೇ ಆವೃತ್ತಿ ಇಂದು ಸಂಜೆ ಆರಂಭಗೊಂಡಿದ್ದು, ವಡೋದರದ ಕೊಟಂಬಿ ಕ್ರೀಡಾಂಗಣದಲ್ಲಿ ಸ್ಮೃತಿ ಮಂಧಾನ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಆಶ್ಲೀಗ್ ಗಾರ್ಡ್ನರ್ ನೇತೃತ್ವದ ಗುಜರಾತ್ ಜೈಂಟ್ಸ್ ವಿರುದ್ಧ ಆರಂಭಿಕ ಪಂದ್ಯವನ್ನು ಎದುರಿಸಲಿದೆ.

ಇದೀಗ ಟಾಸ್‌ ಗೆದ್ದ ಆರ್‌ಸಿಬಿ ತಂಡ ಫೀಲ್ಡಿಂಗ್‌ಗೆ ಇಳಿದು, ಗುಜರಾತ್‌ ಜೈಂಟ್ಸ್‌ ಅನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿದೆ. ಆರ್‌ಸಿಬಿ ತಂಡದ ನಾಯಕಿ ಸ್ಮೃತಿ ಮಂಧಾನ ಅವರು ಟಾಸ್ ಗೆಲ್ಲುತ್ತಿದ್ದ ಹಾಗೇ ಸ್ಟೇಡಿಯಂನಲ್ಲಿದ್ದ ಆರ್‌ಸಿಬಿ ಅಭಿಮಾನಿಗಳು ಜೋರಾಗಿ  ಕೂಗಿ ಖುಷಿ ವ್ಯಕ್ತಪಡಿಸಿದರು.

WPL 2024ರಲ್ಲಿ ಎರಡೂ ತಂಡಗಳು ನಿಖರವಾಗಿ ವಿರುದ್ಧ ಫಲಿತಾಂಶಗಳನ್ನು ಹೊಂದಿದ್ದವು, ಆದರೆ RCB ಅಂತಿಮ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಅನ್ನು ಸೋಲಿಸುವ ಮೂಲಕ ಟ್ರೋಫಿಯನ್ನು ಮುಡಿಗೇರಿಸಿಕೊಂಡಿತು. ಇದೀಗ ಇಂದಿನ ಪಂದ್ಯಾವಳಿ ಹೈವೋಲ್ಟೇಜ್ ಕ್ರಿಯೇಟ್ ಮಾಡಿದ್ದು, ಆರ್‌ಸಿಬಿ ಅಭಿಮಾನಿಗಳು ಗೆಲುವಿನ ನಿರೀಕ್ಷೆಯಲಿದ್ದಾರೆ.

THE ROAR FOR RCB & SMRITI MANDHANA IN THE AWAY GROUND IN WPL. ???????? pic.twitter.com/V0sT85Hota

— Johns. (@CricCrazyJohns) February 14, 2025

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ