ಡಬ್ಲ್ಯುಪಿಎಲ್: ಪ್ಲೇ ಆಫ್ ನಲ್ಲಿ ಮುಂಬೈ ಇಂಡಿಯನ್ಸ್ ಭರ್ಜರಿ ಬ್ಯಾಟಿಂಗ್

ಶುಕ್ರವಾರ, 24 ಮಾರ್ಚ್ 2023 (21:02 IST)
ಮುಂಬೈ: ಡಬ್ಲ್ಯುಪಿಎಲ್ ಪ್ಲೇ ಆಫ್ ಪಂದ್ಯದಲ್ಲಿ ಯುಪಿ ವಾರಿಯರ್ಸ್ ವಿರುದ್ಧ ಸೆಣಸಾಡುತ್ತಿರುವ ಮುಂಬೈ ಇಂಡಿಯನ್ಸ್ ಮೊದಲು ಬ್ಯಾಟಿಂಗ್ ಮಾಡಿ 20 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 182 ರನ್ ಗಳಿಸಿದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ ಗಿಳಿಸಲ್ಪಟ್ಟ ಮುಂಬೈಗೆ ಸಿವರ್ ಬ್ರಂಟ್ ಅತ್ಯುತ್ತಮ ಇನಿಂಗ್ಸ್ ಆಡಿದರು. ಅವರು ಕೇವಲ 38 ಎಸೆತಗಳಿಂದ ಔಟಾಗದೇ 72 ರನ್ ಗಳಿಸಿ ಮುಂಬೈ ಬ್ಯಾಟಿಂಗ್ ನ ಬೆನ್ನುಲುಬಾದರು. ಹೀಲೇ ಮ್ಯಾಥ್ಯೂಸ್ 26, ಮಿಲಿ ಕೇರ್ 29, ಯಶಿಕಾ ಭಾಟಿಯಾ 21, ಹರ್ಮನ್ ಪ್ರೀತ್ ಕೌರ್ 14 ರನ್ ಗಳಿಸಿದರು.

ಕೊನೆಯಲ್ಲಿ ಬಂದ ಪೂಜಾ ವಸ್ತ್ರಾಕರ್ 4 ಎಸೆತಗಳಿಂದ 11 ರನ್ ಗಳಿಸುವ ಮೂಲಕ ಮುಂಬೈಗೆ ಸುಭದ್ರ ಮೊತ್ತ ಗಳಿಸಿಕೊಟ್ಟರು. ಇದೀಗ ಯುಪಿ ಗೆಲ್ಲಲು 183 ರನ್ ಗಳ ಬೃಹತ್ ಮೊತ್ತ ಬೆನ್ನತ್ತಬೇಕಿದೆ. ಗೆದ್ದವರು ಫೈನಲ್ ತಲುಪಲಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ