WTC Final: ದಕ್ಷಿಣ ಆಫ್ರಿಕಾಗೆ WTC ಫೈನಲ್ ಯೋಗ, ಇನ್ನು ಒಂದು ಟೆಸ್ಟ್ ಗೆದ್ದರೂ ಸಾಕು

Krishnaveni K

ಸೋಮವಾರ, 9 ಡಿಸೆಂಬರ್ 2024 (16:06 IST)
Photo Credit: X
ದುಬೈ: ಐಸಿಸಿ ಟೆಸ್ಟ್ ಚಾಂಪಿಯನ್ ಶಿಪ್ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿದ ದಕ್ಷಿಣ ಆಫ್ರಿಕಾ ತಂಡಕ್ಕೆ ಈಗ ಮೊದಲ ಬಾರಿಗೆ ಫೈನಲ್ ಗೇರುವ ಯೋಗ ಎದುರಾಗಿದೆ. ಇನ್ನು ಒಂದು ಪಂದ್ಯ ಗೆದ್ದರೂ ಆಫ್ರಿಕಾ ಫೈನಲ್ ಗೇರಲಿದೆ.

ನಿನ್ನೆ ಅಡಿಲೇಡ್ ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಟೀಂ ಇಂಡಿಯಾ ಸೋತ ಬೆನ್ನಲ್ಲೇ ಡಬ್ಲ್ಯುಟಿಸಿ ಫೈನಲ್ ಲೆಕ್ಕಾಚಾರಗಳು ತಲೆಕೆಳಗಾದವು. ಮೊದಲ ಸ್ಥಾನದಲ್ಲಿ 60.71 ಪ್ರತಿಶತಕ ಅಂಕಗಳೊಂದಿಗೆ ಆಸ್ಟ್ರೇಲಿಯಾ ತಂಡವಿದೆ. ಇದೀಗ ಶ್ರೀಲಂಕಾ ವಿರುದ್ಧ ಟೆಸ್ಟ್ ಪಂದ್ಯವನ್ನು ಗೆದ್ದ ದಕ್ಷಿಣ ಆಫ್ರಿಕಾ ಒಟ್ಟು 59.26 ಪ್ರತಿಶತ ಅಂಕಗಳೊಂದಿಗೆ ಎರಡನೇ ಸ್ಥಾನಕ್ಕೇರಿದೆ. ನಿನ್ನೆಯ ಸೋಲಿನ ಬಳಿಕ ಭಾರತದ ಅಂಕ ಕುಸಿತವಾಗಿದ್ದು 57.69 ಪ್ರತಿಶತ ಅಂಕಗಳೊಂದಿಗೆ ಮೂರನೇ ಸ್ಥಾನಕ್ಕೆ ಜಾರಿದೆ.

ಇದರಿಂದಾಗಿ ಈಗ ಡಬ್ಲ್ಯುಟಿಸಿ ಫೈನಲ್ ನಲ್ಲಿ ಆಡುವ ಅವಕಾಶ ದ. ಆಫ್ರಿಕಾಗೆ ಹೆಚ್ಚಿದೆ. ಆಫ್ರಿಕಾಗೆ ಇನ್ನು ಪಾಕಿಸ್ತಾನ ವಿರುದ್ಧ ಮೂರು ಟೆಸ್ಟ್ ಪಂದ್ಯವಿದ್ದು ಇದರಲ್ಲಿ ಒಂದು ಪಂದ್ಯ ಗೆದ್ದರೂ ಫೈನಲ್ ಗೇರಲು ಅವಕಾಶವಿದೆ. ಇನ್ನೊಂದೆಡೆ ಭಾರತ ಮತ್ತೆ ಫೈನಲ್ ಗೆ ಬರಬೇಕಾದರೆ ಆಸ್ಟ್ರೇಲಿಯಾ ವಿರುದ್ಧದ ಮುಂದಿನ ಮೂರೂ ಪಂದ್ಯಗಳನ್ನು ಗೆಲ್ಲಲೇಬೇಕಾದ ಅನಿವಾರ್ಯತೆಯಿದೆ.

ಒಂದು ವೇಳೆ ಭಾರತ ಮುಂದಿನ ಎಲ್ಲಾ ಟೆಸ್ಟ್ ಪಂದ್ಯವನ್ನು ಗೆದ್ದರೆ ಆಸ್ಟ್ರೇಲಿಯಾ ಫೈನಲ್ ಅವಕಾಶ ಕಳೆದುಕೊಳ್ಳಲಿದೆ. ಭಾರತ ಮತ್ತು ದ ಆಫ್ರಿಕಾ ಫೈನಲ್ ಗೇರಬಹುದು. ಹೀಗಾಗಿ ಇಂದು ದ ಆಫ್ರಿಕಾ-ಶ್ರೀಲಂಕಾ ಟೆಸ್ಟ್ ಪಂದ್ಯದ ಫಲಿತಾಂಶ ಡಬ್ಲ್ಯುಟಿಸಿ ಫೈನಲ್ ಲೆಕ್ಕಾಚಾರವನ್ನೇ ತಲೆಕೆಳಗು ಮಾಡಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ