ಡಬ್ಲ್ಯುಟಿಸಿ ಫೈನಲ್: ಟೀಂ ಇಂಡಿಯಾ ಗೆಲ್ಲಲು ಬೇಕಿದೆ 444 ರನ್
ದ್ವಿತೀಯ ಇನಿಂಗ್ಸ್ ನಲ್ಲಿ 173 ರನ್ ಗಳ ಮುನ್ನಡೆ ಹೊಂದಿದ್ದ ಆಸೀಸ್ ಮತ್ತೆ 8 ವಿಕೆಟ್ ನಷ್ಟಕ್ಕೆ 270 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿತು. ಅಲೆಕ್ಸ್ ಕ್ಯಾರೀ ಅಜೇಯ 66, ಮಿಚೆಲ್ ಸ್ಟಾರ್ಕ್ 44 ರನ್ ಗಳಿಸಿದರು. ಭಾರತದ ಪರ ಸ್ಪಿನ್ನರ್ ರವೀಂದ್ರ ಜಡೇಜಾ 3, ಮೊಹಮ್ಮದ್ ಶಮಿ, ಉಮೇಶ್ ಯಾದವ್ ತಲಾ 2 ಮತ್ತು ಮೊಹಮ್ಮದ್ ಸಿರಾಜ್ 1 ವಿಕೆಟ್ ತಮ್ಮದಾಗಿಸಿಕೊಂಡರು.
ಈ ಬೃಹತ್ ಮೊತ್ತ ಬೆನ್ನತ್ತಿರುವ ಟೀಂ ಇಂಡಿಯಾ ಇತ್ತೀಚೆಗಿನ ವರದಿ ಬಂದಾಗ ವಿಕೆಟ್ ನಷ್ಟವಿಲ್ಲದೇ 5 ರನ್ ಗಳಿಸಿತ್ತು. ಇಂದಿನ ದಿನದಾಟದಲ್ಲಿ 45 ಓವರ್ ಗಳ ಆಟ ಬಾಕಿಯಿದೆ. ನಾಳೆ ಪೂರ್ತಿ ದಿನ ಟೀಂ ಇಂಡಿಯಾ ಬ್ಯಾಟಿಂಗ್ ಮಾಡಿದರೆ ಮಾತ್ರ ಕನಿಷ್ಠ ಡ್ರಾ ಸಾಧಿಸಲು ಸಾಧ್ಯ. ಹೀಗಾಗಿ ಬಹುತೇಕ ಈ ಪಂದ್ಯ ಆಸೀಸ್ ಪರ ವಾಲಿದೆ.