WTC Finals: ಮಂದ ಬೆಳಕಿನ ನಡುವೆ ಕೊಹ್ಲಿ-ರೆಹಾನೆ ಮಿಂಚು

ಭಾನುವಾರ, 20 ಜೂನ್ 2021 (09:09 IST)
ಸೌಥಾಂಪ್ಟನ್: ನ್ಯೂಜಿಲೆಂಡ್ ವಿರುದ್ದ ನಡೆಯುತ್ತಿರುವ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಪಂದ್ಯದ ದ್ವಿತೀಯ ದಿನದಂತ್ಯಕ್ಕೆ ಟೀಂ ಇಂಡಿಯಾ ಮೊದಲ ಇನಿಂಗ್ಸ್ ನಲ್ಲಿ 3 ವಿಕೆಟ್ ಕಳೆದುಕೊಂಡು 146 ರನ್ ಗಳಿಸಿದೆ.


ನಿನ್ನೆ ಹೆಚ್ಚುವರಿ ಓವರ್ ಆಡಲು ನಿರ್ಧರಿಸಿದ್ದ ತಂಡಗಳಿಗೆ ಮಂದಬೆಳಕಿನ ಸಮಸ್ಯೆ ಕಾಡಿತು. ಮೊದಲ ದಿನ ಮಳೆಗೆ ಆಹುತಿಯಾಗಿದ್ದರೆ ನಿನ್ನೆಯ ದಿನದಲ್ಲಿ ಕೇವಲ 64.4 ಓವರ್ ಗಳ ಆಟವಷ್ಟೇ ನಡೆಯಿತು.

ಚೇತೇಶ್ವರ ಪೂಜಾರ 8 ರನ್ ಗೆ ವಿಕೆಟ್ ಒಪ್ಪಿಸಿ ನಡೆದ ಬಳಿಕ ಜೊತೆಯಾಗಿರುವ ನಾಯಕ ವಿರಾಟ್ ಕೊಹ್ಲಿ-ಉಪನಾಯಕ ಅಜಿಂಕ್ಯಾ ರೆಹಾನೆ ಎಚ್ಚರಿಕೆಯ ಆಟವಾಡಿ ಇನಿಂಗ್ಸ್ ಕಟ್ಟುತ್ತಿದ್ದಾರೆ. ಈ ಪೈಕಿ ಕೊಹ್ಲಿ 44 ರನ್ ಗಳಿಸಿದ್ದರೆ, ರೆಹಾನೆ 29 ರನ್ ಗಳಿಸಿ ಆಡುತ್ತಿದ್ದಾರೆ. ಪ್ರತಿಷ್ಠಿತ ಫೈನಲ್ಸ್ ನಲ್ಲಿ ಎಲ್ಲರಿಗಿಂತ ಮಳೆ, ಮಂದಬೆಳಕಿನದ್ದೇ ಮೇಲಾಟ ನಡೆಯುತ್ತಿರುವುದು ವಿಪರ್ಯಾಸ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ