‘ಈಗಲೂ ವಿರಾಟ್ ಕೊಹ್ಲಿಯೇ ತಂಡದ ಬಾಸ್, ನಾನು ಅಸಿಸ್ಟೆಂಟ್ ಅಷ್ಟೇ’

ಬುಧವಾರ, 20 ಡಿಸೆಂಬರ್ 2017 (10:10 IST)
ನವದೆಹಲಿ: ಟೀಂ ಇಂಡಿಯಾದಲ್ಲಿ ಕೋಚ್ ಮೇಲಾ? ನಾಯಕ ಮೇಲಾ? ಈ ಪ್ರಶ್ನೆಗೆ ಟೀಂ ಇಂಡಿಯೋ ಕೋಚ್ ರವಿಶಾಸ್ತ್ರಿ ಉತ್ತರಿಸಿದ್ದಾರೆ.
 

‘ಟೀಂ ಇಂಡಿಯಾ ನಾಯಕನಾಗಿ ಕೊಹ್ಲಿ ಮೈದಾನದ ಹೊರಗೆ ಒಳಗೆ ಸಾಕಷ್ಟು ಪರಿಪಕ್ವತೆ ಪಡೆದಿದ್ದಾರೆ. ಅವರೇ ಇಡೀ ತಂಡದ ನಿಯಂತ್ರಕ. ನಮ್ಮ ಸಲಹೆಗಳಿಗೆ ಅವರು ಯಾವುದೇ ತಕಾರಾರು ತೆಗೆಯಲ್ಲ’ ಎಂದು ರವಿಶಾಸ್ತ್ರಿ ಹೇಳಿದ್ದಾರೆ.

‘ಆತನೇ ತಂಡದ ಬಾಸ್. ಆತ ನಮ್ಮ ಬಳಿ ಸಲಹೆ ಕೇಳಬಹುದು. ಆದರೆ ಅದನ್ನು ಪಾಲಿಸಬೇಕೆಂದಿಲ್ಲ. ನಾನೂ ಕೂಡಾ ಆತನೇ ನಿರ್ಧಾರಗಳನ್ನು ತೆಗೆದುಕೊಳ್ಳಲಿ ಎಂದೇ ಬಯಸುತ್ತೇನೆ’ ಎಂದು ರವಿಶಾಸ್ತ್ರಿ ಹೇಳಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ