ಧೋನಿ, ರೋಹಿತ್ ಗಾಗಿ ಕಾದಿದೆ ಈ ಎರಡು ದಾಖಲೆಗಳು!

ಬುಧವಾರ, 20 ಡಿಸೆಂಬರ್ 2017 (08:19 IST)
ಕಟಕ್: ಇಂದಿನಿಂದ ಶ್ರೀಲಂಕಾ ವಿರುದ್ಧ ಟೀಂ ಇಂಡಿಯಾ ಟಿ20 ಪಂದ್ಯಗಳ ಕಿರು ಸರಣಿ ಆಡಲಿದ್ದು, ಧೋನಿ ಮತ್ತು ರೋಹಿತ್ ಶರ್ಮಾ ಹೊಸ ದಾಖಲೆಯ ಹೊಸ್ತಿಲಲ್ಲಿದ್ದಾರೆ.
 

ಟಿ20 ಪಂದ್ಯಗಳಲ್ಲಿ ವಿಕೆಟ್ ಹಿಂದುಗಡೆ ಅತೀ ಹೆಚ್ಚು ಸ್ಟಂಪ್ ಮತ್ತು ಕ್ಯಾಚ್ ಔಟ್ ಮಾಡಿದ ದಾಖಲೆ ಇದೀಗ ದ. ಆಫ್ರಿಕಾದ ಎಬಿಡಿ ವಿಲಿಯರ್ಸ್ ಹೆಸರಿನಲ್ಲಿದೆ. ಅವರು 72 ಬಾರಿ ಬ್ಯಾಟ್ಸ್ ಮನ್ ಔಟ್ ಆಗುವದಕ್ಕೆ ಕಾರಣರಾಗಿದ್ದಾರೆ.  ಈ ದಾಖಲೆ ಮುರಿಯಲು ಧೋನಿಗೆ ಇನ್ನು ಎರಡು ಬಲಿ ಸಾಕು. ಸದ್ಯ ಧೋನಿ 45 ಕ್ಯಾಚ್ ಮತ್ತು 25 ಸ್ಟಂಪ್ ಔಟ್ ಮಾಡಿದ್ದಾರೆ.

ಇನ್ನೊಂದೆಡೆ ಹಂಗಾಮಿ ನಾಯಕ ರೋಹಿತ್ ಶರ್ಮಾ ಇನ್ನು 15 ರನ್ ಪೇರಿಸಿದರೆ ಟಿ20 ಮಾದರಿಯಲ್ಲಿ 1500 ರನ್ ಪೂರೈಸಿದ ದ್ವಿತೀಯ ಬ್ಯಾಟ್ಸ್ ಮನ್ ಎಂಬ ದಾಖಲೆಗೆ ಪಾತ್ರರಾಗಲಿದ್ದಾರೆ. ವಿರಾಟ್ ಕೊಹ್ಲಿ ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಈ ಎರಡು ದಾಖಲೆಗಳು ನಾಳೆ ಮುರಿಯುವ ನಿರೀಕ್ಷೆಯಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ