ತನ್ನ ಆಯ್ಕೆ ಸಮರ್ಥಿಸಿಕೊಂಡ ಅಜಿಂಕ್ಯಾ ರೆಹಾನೆ

ಶನಿವಾರ, 27 ಜನವರಿ 2018 (07:20 IST)
ಜೊಹಾನ್ಸ್ ಬರ್ಗ್: ದ.ಆಫ್ರಿಕಾ ಟೆಸ್ಟ್ ಸರಣಿಯಲ್ಲಿ ಟೀಂ ಇಂಡಿಯಾ ನಾಯಕ ತಂಡದ ಆಟಗಾರರ ಆಯ್ಕೆ ಬಗ್ಗೆ ಸಾಕಷ್ಟು ಟೀಕೆ ಎದುರಿಸಿದ್ದರು. ಕೊಹ್ಲಿ ಅಜಿಂಕ್ಯಾ ರೆಹಾನೆಯನ್ನು ಆಯ್ಕೆ ಮಾಡದ್ದಕ್ಕೆ ಸಾಕಷ್ಟು ವಿವಾದಕ್ಕೀಡಾಗಿದ್ದರು.
 

ಕೊನೆಗೂ ತೃತೀಯ ಟೆಸ್ಟ್ ಪಂದ್ಯಕ್ಕೆ ಕೊಹ್ಲಿಯನ್ನು ರೆಹಾನೆ ಆಯ್ಕೆ ಮಾಡಿಯೇ ಬಿಟ್ಟರು. ಮೊದಲ ಇನಿಂಗ್ಸ್ ನಲ್ಲಿ ರೆಹಾನೆ ನಿರಾಸೆ ಮಾಡಿದ್ದರೂ, ದ್ವಿತೀಯ ಇನಿಂಗ್ಸ್ ನಲ್ಲಿ ಆಯ್ಕೆ ಸಮರ್ಥಿಸಿಕೊಂಡಿದ್ದಾರೆ.

ಒಂದು ಹಂತದಲ್ಲಿ 135 ರನ್ ಗಳಿಗೆ 5 ವಿಕೆಟ್ ಉದುರಿಸಿಕೊಂಡು ಹೀನಾಯ ಪರಿಸ್ಥಿತಿಯಲ್ಲಿದ್ದ ಟೀಂ ಇಂಡಿಯಾಗೆ ರೆಹಾನೆ ಆಸರೆಯಾದರು.  ವಿರಾಟ್ ಕೊಹ್ಲಿ ವಿಕೆಟ್ ಬಿದ್ದ ಮೇಲೆ ಬಾಲಂಗೋಚಿಗಳನ್ನು ಕಟ್ಟಿಕೊಂಡು ರೆಹಾನೆ ಭಾರತಕ್ಕೆ ಉತ್ತಮ ಮೊತ್ತ ನೀಡಿದರು. ಆದರೆ 48 ರನ್ ಗಳಿಸಿದಾಗ ಔಟಾದರು. ಹಾಗಿದ್ದರೂ ಇದುವರೆಗೆ ದ.ಆಫ್ರಿಕಾದಲ್ಲಿ ಟೀಂ ಇಂಡಿಯಾ ಬ್ಯಾಟ್ಸ್ ಮನ್ ಗಳ ಪ್ರದರ್ಶನ ನೋಡಿದರೆ ರೆಹಾನೆ ನೀಡಿದ ಈ ಪ್ರದರ್ಶನ ಇತರ ಆಟಗಾರರಿಗೆ ಸ್ಪೂರ್ತಿಯ ಚಿಲುಮೆಯಾಯಿತು.

ರೆಹಾನೆ ಸಾಹಸದ ಇನಿಂಗ್ಸ್ ಗೆ ಮಾಜಿ ಆಟಗಾರ ವಿವಿಎಸ್ ಲಕ್ಷ್ಮಣ್ ರಿಂದ ಮೆಚ್ಚುಗೆ ವ್ಯಕ್ತವಾಯಿತು. ಅಷ್ಟೇ ಅಲ್ಲ, ಭುವನೇಶ್ವರ್ ಕುಮಾರ್ ಗೂ ಲಕ್ಷ್ಮಣ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ