ಟೀಂ ಇಂಡಿಯಾ ಕೋಚ್ ಆಗಿ ಕನ್ನಡಿಗ ಅನಿಲ್ ಕುಂಬ್ಳೆ ಆಯ್ಕೆ

ಗುರುವಾರ, 23 ಜೂನ್ 2016 (18:03 IST)
ನವದೆಹಲಿ: ಟೀಂ ಇಂಡಿಯಾ ಕೋಚ್ ಆಗಿ ಕರ್ನಾಟಕದ ಕನ್ನಡಿಗ ಅನಿಲ್ ಕುಂಬ್ಳೆ ಅವರು ನೇಮಕವಾಗಿರುವ ಸುದ್ದಿ ಇದೀಗ ಬಂದಿದೆ. ರವಿ ಶಾಸ್ತ್ರಿ ಅವರನ್ನು ಹಿಂದಿಕ್ಕಿ ಮಾಜಿ ಖ್ಯಾತ ಸ್ಪಿನ್ನರ್ ಅನಿಲ್ ಕುಂಬ್ಳೆ ಟೀಂ ಇಂಡಿಯಾ ಕೋಚ್ ಆಗಿ ಆಯ್ಕೆಯಾಗಿದ್ದಾರೆ.  

ಕೋಚ್ ಅವರನ್ನು ಆಯ್ಕೆ ಮಾಡಲು ಗಂಗೂಲಿ, ಲಕ್ಷ್ಮಣ್ ಮತ್ತು ತೆಂಡೂಲ್ಕರ್ ಆಯ್ಕೆ ಸಮಿತಿಯನ್ನು ಬಿಸಿಸಿಐ ನೇಮಿಸಿತ್ತು. ರವಿ ಶಾಸ್ತ್ರಿ ಅವರು ಟೀಂ ಇಂಡಿಯಾದ ಮಾಜಿ ಡೈರೆಕ್ಟರ್ ಆಗಿದ್ದು ಅವರಿಗೆ ತುಂಬಾ ಅನುಭವವಿರುವ ಹಿನ್ನೆಲೆಯಲ್ಲಿ ರವಿ ಶಾಸ್ತ್ರಿ ಆಯ್ಗೆಯಾಗಬಹುದೆಂಬ ಊಹಾಪೋಹ ಹರಡಿತ್ತು. ಆದರೆ ರವಿಶಾಸ್ತ್ರಿ ಅವರನ್ನು ಹಿಂದಿಕ್ಕಿ ಅನಿಲ್ ಕುಂಬ್ಳೆ ಕೋಚ್ ಆಗಿ ನೇಮಕವಾಗಿರುವುದು ಕನ್ನಡಿಗರಿಗೆ ಸಂತೋಷದ ಸಂಗತಿಯಾಗಿದೆ.  ಕೋಚ್ ಹುದ್ದೆಗೆ ಸುಮಾರು 57 ಮಂದಿ ಅಭ್ಯರ್ಥಿಗಳನ್ನು ಪಟ್ಟಿ ಮಾಡಿ ಅಂತಿಮವಾಗಿ 21 ಮಂದಿಯನ್ನು ಸಂದರ್ಶನಕ್ಕೆ ಆಯ್ಕೆ ಮಾಡಲಾಗಿತ್ತು. 
 
ಅನಿಲ್ ಕುಂಬ್ಳೆ ಭಾರತದ ಮಾಜಿ ನಾಯಕರಾಗಿದ್ದರು. ಬಲಗೈ ಲೆಗ್ ಸ್ಪಿನ್ ಬೌಲರ್ ಆಗಿದ್ದ ಕುಂಬ್ಳೆ ಟೆಸ್ಟ್ ಕ್ರಿಕೆಟ್‌ನಲ್ಲಿ 619 ವಿಕೆಟ್ ಕಬಳಿಸಿದ್ದಾರೆ. ಕುಂಬ್ಳೆ ಚೆಂಡನ್ನು ತುಂಬಾ ಟರ್ನ್ ಮಾಡದಿದ್ದರೂ  ಪೇಸ್ ಮತ್ತು ನಿಖರತೆಯಲ್ಲಿ ಹೆಚ್ಚು ಅವಲಂಬನೆಯಾಗಿದ್ದರು. ವಿವಿಧ ವ್ಯತ್ಯಾಸಗಳೊಂದಿಗೆ ಚೆಂಡನ್ನು ಬೌನ್ಸ್ ಮಾಡುವ ಸಾಮರ್ಥ್ಯದಿಂದ ಕಠಿಣ ಬೌಲರ್ ಎನಿಸಿದ್ದರು. ಇದು ಅವರಿಗೆ ಜಂಬೊ ಎಂಬ ಬಿರುದನ್ನು ತಂದುಕೊಟ್ಟಿದೆ. 1993ರಲ್ಲಿ ಕುಂಬ್ಳೆ ವರ್ಷದ ಭಾರತೀಯ ಕ್ರಿಕೆಟರ್ ಎಂಬ ಗೌರವಕ್ಕೆ ಪಾತ್ರರಾಗಿದ್ದರು. 

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ