ಹಾರ್ದಿಕ್ ಪಾಂಡ್ಯ, ಕೆಎಲ್ ರಾಹುಲ್ ಗೆ ಬಿಸಿಸಿಐ ನೀಡಿದ ಶೋಕಾಸ್ ನೋಟಿಸ್ ಗೆ ಹಾಕಿದ ಸಹಿಯೇ ಈಗ ವಿವಾದದಲ್ಲಿ!

ಗುರುವಾರ, 10 ಜನವರಿ 2019 (10:19 IST)
ಮುಂಬೈ: ಕರಣ್ ಜೋಹರ್ ನಡೆಸಿಕೊಡುವ ಕಾಫಿ ವಿತ್ ಕರಣ್ ಶೋನಲ್ಲಿ ಮಹಿಳೆಯರ ಬಗ್ಗೆ ಅಸಭ್ಯವಾಗಿ ಕಾಮೆಂಟ್ ಮಾಡಿದ್ದಕ್ಕೆ ಬಿಸಿಸಿಐ ಟೀಂ ಇಂಡಿಯಾ ಕ್ರಿಕೆಟಿಗರಾದ ಹಾರ್ದಿಕ್ ಪಾಂಡ್ಯ ಮತ್ತು ಕೆಎಲ್ ರಾಹುಲ್ ಗೆ ಶೋಕಾಸ್ ನೋಟಿಸ್ ನೋಡಿತ್ತು.


ಆದರೆ ಆ ನೋಟಿಸ್ ಗೆ ಹಾಕಲಾದ ಸಹಿ ಬಗ್ಗೆಯೇ ಈಗ ವಿವಾದ ಹುಟ್ಟಿಕೊಂಡಿದೆ. ಈ ಶೋಕಾಸ್ ನೋಟಿಸ್ ಗೆ ಸಹಿ ಹಾಕಿದ್ದು ಬಿಸಿಸಿಐ ಸಿಇಒ ರಾಹುಲ್ ಜೋಹ್ರಿ. ವಿಪರ್ಯಾಸವೆಂದರೆ ಇದೇ ಜೋಹ್ರಿ ಲೈಂಗಿಕ ಕಿರುಕುಳ ಆರೋಪದಲ್ಲಿ ತನಿಖಾ ಸಮಿತಿಯೆದುರು ವಿಚಾರಣೆ ಎದುರಿಸುತ್ತಿದ್ದಾರೆ.

ಹೀಗಾಗಿ ಕ್ರಿಕೆಟಿಗರಿಗೆ ನೀಡಿದ ನೋಟಿಸ್ ಗೆ ಜೋಹ್ರಿ ಸಹಿ ಹಾಕಿದ್ದು ಎಷ್ಟು ಸರಿ ಎಂಬ ವಿಚಾರದ ಬಗ್ಗೆ ಬಿಸಿಸಿಐ ಒಳಗೇ ಗುದ್ದಾಟ ಶುರುವಾಗಿದೆ. ‘ಇದು ವಸಾಹತುಶಾಹಿ ದೊರೆ ಮೊಹಮ್ಮದ್ ಘಜನಿಗೆ ಶಾಂತಿ ನಿಯೋಗದ ಅಧ್ಯಕ್ಷ ಸ್ಥಾನ ನೀಡಿದಂತೆ’ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಆಂಗ್ಲ ವಾಹಿನಿಯೊಂದರಲ್ಲಿ ಲೇವಡಿ ಮಾಡಿದ್ದಾರೆ.

ಮಹಿಳೆಯರೊಂದಿಗೆ ಅಸಭ್ಯವಾಗಿ ವರ್ತಿಸಿದ ಆರೋಪದಲ್ಲಿರುವ ವ್ಯಕ್ತಿ, ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ರಿಕೆಟಿಗರಿಗೆ ನೀಡಲಾದ ನೋಟಿಸ್ ಗೆ ಸಹಿ ಹಾಕುವ ಅರ್ಹತೆ ಹೇಗೆ ಪಡೆದುಕೊಂಡರು ಎಂಬುದು ಬಿಸಿಸಿಐ ಒಳಗೇ ಚರ್ಚೆಗೆ ಗ್ರಾಸವಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ