ಐಪಿಎಲ್ ಗೆ ಮೊದಲು ಅಬ್ಬರಿಸಿದ ಕ್ರಿಸ್ ಗೇಲ್

ಗುರುವಾರ, 4 ಫೆಬ್ರವರಿ 2021 (10:57 IST)
ದುಬೈ: ಅಬುದಾಬಿ ಟಿ10 ಲೀಗ್ ನಲ್ಲಿ ಬ್ಯಾಟಿಂಗ್ ಮೂಲಕ ಅಬ್ಬರಿಸಿದ ವಿಂಡೀಸ್ ದೈತ್ಯ ಕ್ರಿಸ್ ಗೇಲ್ ಐಪಿಎಲ್ ಗೆ ಭರ್ಜರಿ ಸೂಚನೆ ಕೊಟ್ಟಿದ್ದಾರೆ.


ಅಬುದಾಬಿ ತಂಡದ ಪರ ಆಡಿದ ಗೇಲ್ 22 ಬಾಲ್ ಗಳಲ್ಲಿ 9 ಸಿಕ್ಸರ್, ಆರು ಬೌಂಡರಿ ಸಹಿತ 84 ರನ್ ಚಚ್ಚಿ ಅಜೇಯರಾಗುಳಿದರು. ಅವರ ಈ ಅಬ್ಬರದ ಬ್ಯಾಟಿಂಗ್ ನಿಂದಾಗಿ ಮರಾಠ ಅರಬಿಯನ್ಸ್ ತಂಡದ ವಿರುದ್ಧ ಗೇಲ್ ತಂಡ 9 ವಿಕೆಟ್ ಗಳ ಭರ್ಜರಿ ಜಯ ಗಳಿಸಿತು. ಐಪಿಎಲ್ ಗೆ ಕೆಲವೇ ತಿಂಗಳುಗಳ ಮುನ್ನ ಗೇಲ್ ತಮ್ಮ ಬ್ಯಾಟಿಂಗ್ ಫಾರ್ಮ್ ಕಂಡುಕೊಂಡು ಎದುರಾಳಿಗಳಿಗೆ ಖಡಕ್ ಸಂದೇಶ ಕೊಟ್ಟಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ