ಜಂಬೋ ಜೆಟ್ ಅನಿಲ್ ಕುಂಬ್ಳೆಗೆ ಐವತ್ತರ ಹುಟ್ಟುಹಬ್ಬ

ಶನಿವಾರ, 17 ಅಕ್ಟೋಬರ್ 2020 (10:55 IST)
ದುಬೈ: ಭಾರತೀಯ ಕ್ರಿಕೆಟ್ ದಿಗ್ಗಜ ಸ್ಪಿನ್ನರ್ ಅನಿಲ್ ಕುಂಬ್ಳೆಗೆ ಇಂದು 50 ನೇ ಜನ್ಮದಿನದ ಸಂಭ್ರಮ. ಸದ್ಯಕ್ಕೆ ಐಪಿಎಲ್ 13 ರಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿರುವ ಕುಂಬ್ಳೆಗೆ ಸೆಲೆಬ್ರಿಟಿಗಳು, ಅಭಿಮಾನಿಗಳು ವಿಶ್ ಮಾಡುತ್ತಿದ್ದಾರೆ.


ಅನಿಲ್ ಕುಂಬ್ಳೆ ಜನ್ಮದಿನಕ್ಕೆ ಕ್ರಿಕೆಟಿಗರಾದ ವೀರೇಂದ್ರ ಸೆಹ್ವಾಗ್, ಗೌತಮ್ ಗಂಭೀರ್, ಯುವರಾಜ್ ಸಿಂಗ್, ಸುರೇಶ್ ರೈನಾ ಸೇರಿದಂತೆ ಅನೇಕರು ಶುಭ ಕೋರಿದ್ದಾರೆ. ಇವರಲ್ಲದೆ, ನಟ ಕಿಚ್ಚ ಸುದೀಪ್ ಕೂಡಾ ವಿಶೇಷ ಸಂದೇಶದ ಮೂಲಕ ಶ್ರೇಷ್ಠ ಕ್ರಿಕೆಟಿಗ, ಅಪ್ಪಟ ಕನ್ನಡಿಗ ಅನಿಲ್ ಕುಂಬ್ಳೆಗೆ ಶುಭ ಕೋರಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ