ಕ್ರಿಕೆಟಿಗ ರವೀಂದ್ರ ಜಡೇಜಾ ಪತ್ನಿ ಯಾವಾ ಸೆಲೆಬ್ರಿಟಿಗೂ ಕಮ್ಮಿ ಇಲ್ಲ, ಹಿನ್ನೆಲೆ ಕೇಳಿದ್ರೆ ಶಾಕ್ ಆಗ್ತೀರಾ

Sampriya

ಸೋಮವಾರ, 10 ಮಾರ್ಚ್ 2025 (18:56 IST)
Photo Courtesy X
ಬೆಂಗಳೂರು: ಭಾನುವಾರ ದುಬೈನಲ್ಲಿ ನಡೆದ ಐಸಿಸಿ ಚಾಂಪಿಯನ್ಸ್ ಟ್ರೋಫಿ 2025 ರ ಫೈನಲ್‌ನಲ್ಲಿ ಭಾರತ ತಂಡವು ನ್ಯೂಜಿಲೆಂಡ್ ಅನ್ನು ನಾಲ್ಕು ವಿಕೆಟ್‌ಗಳು ಮತ್ತು ಆರು ಎಸೆತಗಳು ಬಾಕಿ ಇರುವಾಗ ರವೀಂದ್ರ ಜಡೇಜಾ ಅವರು ಕೊನೆಯಲ್ಲಿ ಸಿಕ್ಸ್‌ ಬಾರಿಸುವ ಮೂಲಕ ಟೀಂ ಇಂಡಿಯಾ ಅಮೋಘ ಜಯ ಗಳಿಸಿತು.

ಆಲ್‌ ರೌಂಡರ್‌ ಆಗಿರುವ ಜಡೇಜಾ ಅವರು ಭಾರತ ಕ್ರಿಕೆಟ್‌ ತಂಡದಲ್ಲಿ ತಮ್ಮ ಅಮೋಘ ಪ್ರದರ್ಶನದ ಮೂಲಕ ಗುರುತಿಸಿಕೊಂಡಿದ್ದಾರೆ. ಜಡೇಜಾ ಅವರ ವೈಯಕ್ತಿಕ ಬದುಕಿನ ಬಗ್ಗೆ ತಿಳಿದುಕೊಳ್ಳುವುದಾದರೆ ಅವರ ಪತ್ನಿ ಶಾಸಕಿಯಾಗಿ 2022ರಿಂದ ಸಾಮಾಜಿಕವಾಗಿ ಗುರುತಿಸಿಕೊಂಡಿದ್ದಾರೆ.

ರಿವಾಬಾ ಜಡೇಜಾ ಅವರು  ಗುಜರಾತ್ 2022 ರ ವಿಧಾನಸಭಾ ಚುನಾವಣೆಯಲ್ಲಿ ಜಾಮ್‌ನಗರ ಉತ್ತರ ಕ್ಷೇತ್ರದಿಂದ ಬಿಜೆಪಿಯಿಂದ ಸ್ಪರ್ಧಿಸಿ ಗೆದ್ದರು.  

ರಿವಾಬಾ ಸೆಪ್ಟೆಂಬರ್ 5, 1990 ರಂದು ಜನಿಸಿದರು. ಅವರು ಗುಜರಾತ್‌ನ ರಾಜ್‌ಕೋಟ್‌ನಲ್ಲಿ ಆತ್ಮೀಯ ತಂತ್ರಜ್ಞಾನ ಮತ್ತು ವಿಜ್ಞಾನ ಸಂಸ್ಥೆಯಲ್ಲಿ ಮೆಕ್ಯಾನಿಕಲ್ ಎಂಜಿನಿಯರಿಂಗ್ ಅಧ್ಯಯನ ಮಾಡಿದರು. ಇವರು 2016ರಲ್ಲಿ ಕ್ರಿಕೆಟಿಗ ರವೀಂದ್ರ ಜಡೇಜಾ ಅವರನ್ನು ವಿವಾಹವಾದರು.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ