ಹೆತ್ತವರಿಗೆ ಅನಾರೋಗ್ಯ: ಧೋನಿಗೆ ಚೆನ್ನೈ ತಂಡ ಸಹಕಾರ

ಗುರುವಾರ, 22 ಏಪ್ರಿಲ್ 2021 (10:31 IST)
ಮುಂಬೈ: ಇತ್ತ ಐಪಿಎಲ್ ನಲ್ಲಿ ಚೆನ್ನೈ ತಂಡವನ್ನು ಮುನ್ನಡೆಸುತ್ತಿದ್ದರೆ ಧೋನಿಗೆ ತವರಿನಲ್ಲಿ ಕೊರೋನಾ ಸೋಂಕಿಗೊಳಗಾಗಿರುವ ತಂದೆ-ತಾಯಿಯರದ್ದೇ ಚಿಂತೆಯಾಗಿದೆ.


ಧೋನಿಗೆ ಐಪಿಎಲ್ ಪಂದ್ಯದ ಜೊತೆಗೆ ತಮ್ಮ ಪೋಷಕರ ಆರೋಗ್ಯದ ಬಗ್ಗೆ ತಿಳಿದುಕೊಳ್ಳಲು ಚೆನ್ನೈ ತಂಡ ಎಲ್ಲಾ ರೀತಿಯ ಸಹಕಾರ ನೀಡುತ್ತಿದೆ ಎಂದು ಕೋಚ್ ಫ್ಲೆಮಿಂಗ್ ಹೇಳಿದ್ದಾರೆ.

ಧೋನಿ ತಂದೆ ಪಾನ್ ಸಿಂಗ್ ಮತ್ತು ತಾಯಿ ದೇವಕಿ ರಾಂಚಿಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು, ಅವರ ಆಕ್ಸಿಜನ್ ಲೆವೆಲ್ ಸ್ಥಿರವಾಗಿದೆ. ಆತಂಕಪಡುವ ಅಗತ್ಯವೇನಿಲ್ಲ. ಹಾಗಿದ್ದರೂ ಧೋನಿಗೆ ಆಗಾಗ ತಮ್ಮ ಹೆತ್ತವರ ಆರೋಗ್ಯದ ಬಗ್ಗೆ ತಿಳಿದುಕೊ‍ಳ್ಳಲು ಮತ್ತು ಅವರ ಚಿಕಿತ್ಸೆಗೆ ಬೇಕಾದ ಎಲ್ಲಾ ನೆರವನ್ನೂ ಸಿಎಸ್ ಕೆ ಫ‍್ರಾಂಚೈಸಿ ಮಾಡುತ್ತಿದೆ ಎಂದು ಫ್ಲೆಮಿಂಗ್ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ