ರೋಹಿತ್ ಶರ್ಮಾಗೆ 12 ಲಕ್ಷ ರೂ. ದಂಡದ ಶಿಕ್ಷೆ

ಬುಧವಾರ, 21 ಏಪ್ರಿಲ್ 2021 (10:42 IST)
ಚೆನ್ನೈ: ಐಪಿಎಲ್ 14 ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್  ವಿರುದ್ಧ ಸೋತ ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾಗೆ ಈಗ ದಂಡದ ಬರೆ ಸಿಕ್ಕಿದೆ.


ನಿಧಾನಗತಿಯ ಓವರ್ ಮಾಡಿದ್ದಕ್ಕೆ ನಾಯಕ ರೋಹಿತ್ ಶರ್ಮಾಗೆ ಐಪಿಎಲ್ ನಿಯಮಗಳ ಅನುಸಾರ 12 ಲಕ್ಷ ರೂ. ದಂಡ ವಿಧಿಸಲಾಗಿದೆ. ಇದಕ್ಕೂ ಮೊದಲು ಧೋನಿ ಈ ಆವೃತ್ತಿಯಲ್ಲಿ ದಂಡ ತೆತ್ತಿದ್ದರು.

ನಿಯಮಗಳ ಪ್ರಕಾರ 90 ನಿಮಿಷದ ಅವಧಿಯಲ್ಲಿ ಒಂದು ಇನಿಂಗ್ಸ್ ಪೂರ್ತಿಯಾಗಬೇಕು. ಆದರೆ ರೋಹಿತ್ ತಂಡ ಈ ಅವಧಿ ಮೀರಿದ್ದರಿಂದ ನಾಯಕನಿಗೆ ದಂಡ ವಿಧಿಸಲಾಗಿದೆ. ಈ ತಪ್ಪು ಪುನರಾವರ್ತನೆಯಾದರೆ ರೋಹಿತ್ ಗಂಭೀರ ಶಿಸ್ತು ಕ್ರಮ ಎದುರಿಸಬೇಕಾಗಬಹುದು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ